IMG_20251230_220529.jpg
Spread the love

ಕಾರ್ಕಳ: ದಿನಾಂಕ:30-12-2025(ಹಾಯ್ ಉಡುಪಿ ನ್ಯೂಸ್) ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಮಹಿಳೆಯೋರ್ವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ಮಹಿಳೆಯ ಸಾವಿಗೆ ಕಾರಣ ರಾದ ವೈದ್ಯರುಗಳ ಮೇಲೆ  ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಮತಿ,ಮುಬೀನಾ ಎಂಬವರ ತಾಯಿ ಶ್ರೀಮತಿ. ಝಬೇದ್ ( 52 ವರ್ಷ) ಇವರು ಸುಮಾರು ಸಮಯದಿಂದ ಆನಾ ರೋಗ್ಯದಿಂದ ಬಳಲುತ್ತಿದ್ದು, ದಿನಾಂಕ 10.05. 2025 ರಿಂದ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ  ಹೋಗುತ್ತಿದ್ದು ದಿನಾಂಕ 14.05.2025 ರಂದು ಬೆಳಿಗ್ಗೆ   ವಿಪರೀತ ಹೊಟ್ಟೆ ನೋವು ಕಾಣಿಸಿ ಕೊಂಡ ಕಾರಣ ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಹೋಗಿದ್ದು,ಅಲ್ಲಿ ಝುಬೇದ್ ಅವರನ್ನು ಪರೀಕ್ಷಿಸಿ ಡ್ರಿಪ್ಸ್ ಹಾಕಿದ್ದು ಈ ಸಮಯ ವೈದ್ಯರು ಬಂದು ಪರಿಶೀಲಿಸುವಂತೆ ಸಂಬಂಧಿಕರು ಎಷ್ಟೇ ಕೇಳಿಕೊಂಡರೂ, ವೈದ್ಯರು ಬಂದಿರುವುದಿಲ್ಲ, ನಂತರ ಸುಮಾರು ಒಂದು ಗಂಟೆ ಬಿಟ್ಟು ಡಾ, ನಾಗರತ್ನ ಎಂಬವರು ಬಂದು ಈ ಕೂಡಲೇ ಆಪರೇಷನ್ ಮಾಡಬೇಕು ಜೀವಕ್ಕೆ ಅಪಾಯ ಇದೆ ಎಂದು ಹೇಳಿ ಕೂಡಲೇ ಆಸ್ಪತ್ರೆಯ ಆಪರೇಷನ್ ಕೊಠಡಿ ಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಡಾ,. ನಾಗರತ್ನ ಡಾ, ರೆಹಮತ್ತುಲ್ಲಾ ಹಾಗೂ ಡಾ,.ಕೆ.ಎಸ್ ರಾವ್ ಅವರು ಆಪರೇಷನ್ ಥಿಯೇಟರ್ ಒಳಗಡೆ ಹೋಗಿದ್ದು, ನಂತರ  ಆಪರೇಷನ್ ಥಿಯೇಟರ್‌‌ನಿಂದ ಹೊರಗಡೆ ಬಂದ ಡಾ, ರೆಹಮತ್ತುಲಾ ಅವರು ಇಲ್ಲಿ ಆಗುವುದಿಲ್ಲ ಮಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದು, ಆ ನಂತರ ಆಪರೇಷನ್ ಥಿಯೇಟರ್‌ ‌ನೊಳಗಡೆ ಹೋಗಿ ನೋಡಿದಾಗ ವೈಧ್ಯಾಧಿಕಾರಿಯವರು ಪರೀಕ್ಷಿಸಿ ಝುಬೇದ್ ಅವರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.

ಮೃತ ಝಬೇದ್ ಅವರಿಗೆ ವೈಧ್ಯಾಧಿಕಾ ರಿಯವರು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೇ ಹಾಗೂ ಸರಿಯಾಗಿ ಪರೀಕ್ಷೆ ಮಾಡದೇ ನಿರ್ಲಕ್ಷತ ನದಿಂದ ಆಪರೇಷನ್ ಮಾಡಿರುತ್ತಾರೆ ಎಂದು ಶ್ರೀಮತಿ ಮುಬೀನಾ ಅವರು ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ವೈಧ್ಯಾಧಿಕಾರಿಯವರ ವಿರುದ್ದ ನೀಡಿದ ದೂರನ್ನು ಸ್ವೀಕರಿಸಿದ ಕಾರ್ಕಳ ನಗರ ಪೊಲೀಸರು ಕಲಂ 194 (3) (iv) BNSS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈ ಪ್ರಕರಣದಲ್ಲಿ ಮೃತ ಝಬೇದ್ ಅವರ ಮರಣದ ಬಗ್ಗೆ ವೈಧ್ಯಾಧಿಕಾರಿಯವರ ನಿರ್ಲಕ್ಷತೆಯ ಬಗ್ಗೆ ವಿಚಾರಣೆ ನಡೆಯಿಸಿ ವರದಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿಯವರು  ಕೋರಿಕೆ ಪತ್ರ ನೀಡಿದಂತೆ ಈ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ರವರಾದ  ಡಾ. ಹೆಚ್.ಅಶೋಕ  ಅವರು ವರದಿ ನೀಡಿದ್ದು ಅದರಲ್ಲಿ ಆರೋಪಿತರಾದ ವೈಧ್ಯಾಧಿಕಾರಿಯವರು ಆಪರೇಶನ್ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚ ರಿಕೆ ಕ್ರಮ ಕೈಗೊಳ್ಳದೆ ಇರುವುದು ಮತ್ತು ಸಾಕಷ್ಟು ಕಾಲಾವಕಾಶ ಇದ್ದರೂ ರೋಗಿಯ ಸ್ಥಿತಿಗತಿಯ ಬಗ್ಗೆ ರೋಗಿಗೆ ಸಂಬಂಧ ಪಟ್ಟ ವರಿಗೆ ಮಾಹಿತಿ ನೀಡದೇ ಇರುವುದು ಕಂಡು ಬರುತ್ತದೆ ಹಾಗೂ ರೋಗಿಯ ಆಪರೇಷನ್ ಆಗುವಾಗಲೇ ಮರಣ ಹೊಂದಿರುವುದು ವೈಧ್ಯಾಧಿಕಾರಿಗಳ ಲಿಖಿತ ಹೇಳಿಕೆಯಿಂದ ದೃಡಪಟ್ಟಿರುತ್ತದೆ. ಶಸ್ತ್ರ ಚಿಕಿತ್ಸೆ ನೀಡಿದ ವೈಧ್ಯರ ನಿರ್ಲಕ್ಷತನ ಮೇಲ್ಮೊಟಕ್ಕೆ ಕಂಡು ಬಂದಿರುತ್ತದೆ ಎಂದು ಅಭಿಪ್ರಾಯ ನೀಡಿರುವ ಮೇರೆಗೆ ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ. 106 R/W 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!