ಬ್ರಹ್ಮಾವರ: ದಿನಾಂಕ: 31-12-2025(ಹಾಯ್ ಉಡುಪಿ ನ್ಯೂಸ್) ಕೊಳಲಗಿರಿ ನಿವಾಸಿ ಮಹಿಳೆಯೋರ್ವರಿಗೆ ಪರಿಚಯದ ವ್ಯಕ್ತಿ ಯೋರ್ವ ವಿದೇಶದಲ್ಲಿ ಕೆಲಸ ಬೇಕಾದವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಏಳು ಲಕ್ಷ ರೂಪಾಯಿ ಹಣ ಪಡೆದು ಇದೀಗ ಕೆಲಸ ಕೊಡಿಸದೆ ವಂಚಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀಮತಿ ಕ್ಲಾರಾ ಡಿಸೋಜಾ,( 43 ವರ್ಷ)ಎಂಬವರು ಕೊಳಲಗಿರಿ ಯಲ್ಲಿ “ಶಾಲೋಮ್ ಹೋಮ್ ನರ್ಸ್ ಸರ್ವೀಸ್”, ಹೆಸರಿನಲ್ಲಿ ಹೋಮ್ ನರ್ಸ್ ಸೇವೆ ನೀಡುವ ಉದ್ಯೋಗ ಮಾಡಿಕೊಂಡಿದ್ದು ಅವರಿಗೆ ಸುಮಾರು ಮೂರು ವರ್ಷಗಳ ಹಿಂದೆ ಆರೋಪಿ ಬಿ.ಇ. ಅಬ್ಬಾಸ್ ಎಂಬವನ ಪರಿಚಯವಾಗಿ ಆತನು ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ಆರೋಪಿ ಅಬ್ಬಾಸ್ ನು ಮಂಗಳೂರಿನ ಕಂಕನಾಡಿಯಲ್ಲಿರುವ ತನ್ನ ಸ್ನೇಹಿತ ರಜಾಕ್ ಎಂಬುವವರ “ಕರಿಯರ್ ಪಾಯಿಂಟ್” (Career Point) ಕಚೇರಿಯ ಮೂಲಕ ಅಭ್ಯರ್ಥಿಗಳನ್ನು ಕಳುಹಿಸುವುದಾಗಿ ತಿಳಿಸಿ, ಅಭ್ಯರ್ಥಿಗಳ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಕಳುಹಿಸಿದರೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದು. ಆರೋಪಿ ಅಬ್ಬಾಸ್ ನ ಮಾತುಗಳನ್ನು ನಂಬಿದ ಶ್ರೀಮತಿ ಕ್ಲಾರಾ ಡಿಸೋಜಾರವರು, ಅವರ ಪರಿಚಯದ 27 ಅಭ್ಯರ್ಥಿಗಳಿಂದ ಒಟ್ಟು 7,00,000 ರೂಪಾಯಿ ಹಣವನ್ನು ಫೋನ್ ಪೇ (Phone Pe) ಮತ್ತು ಗೂಗಲ್ ಪೇ (Google Pay) ಮೂಲಕ ಕಳುಹಿಸಿರುತ್ತಾರೆ.
ಆದರೆ ಆರೋಪಿ ಅಬ್ಬಾಸ್ ಹಣವನ್ನು ಪಡೆದುಕೊಂಡು ಕೇವಲ 9 ಅಭ್ಯರ್ಥಿಗಳಿಗೆ ಮಾತ್ರ ಕೆಲಸ ಕೊಡಿಸಿದ್ದು, ಉಳಿದ 18 ಅಭ್ಯರ್ಥಿಗಳಿಗೆ ಕೆಲಸವನ್ನೂ ಕೊಡಿಸದೆ ಅಥವಾ ಅವರ ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ US 318 BNS ರಂತೆ ಪ್ರಕರಣ ದಾಖಲಾಗಿದೆ.
