Spread the love

ಪಡುಬಿದ್ರಿ: ಏಪ್ರಿಲ್ ೨೯( ಹಾಯ್ ಉಡುಪಿ ನ್ಯೂಸ್) ಮನೆಯಲ್ಲಿ ಯಾರೂ ಇಲ್ಲದ ಸಮಯ ಕಳ್ಳರು ಚಿನ್ನಾಭರಣ,ನಗದು ದೋಚಿದ ಘಟನೆ ನಡೆದಿದೆ.

ದಿನಾಂಕ 28/04/2022 ರಂದು ಬೆಳಿಗ್ಗೆ 11:00 ಗಂಟೆಗೆ ರೋಹಿಣಿ (48),ಬೆಳ್ಳಿಬೆಟ್ಟು, ಫಲಿಮಾರು ಗ್ರಾಮ ಕಾಪು ತಾಲೂಕು ಇವರು ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಅಲ್ಲೇ ಪಕ್ಕದ ಗೋಡೆಯಲ್ಲಿದ್ದ ಹಲಗೆಯಲ್ಲಿ ಇಟ್ಟು ಪಡುಬಿದ್ರಿಗೆ ಸಾಮಾನು ಖರೀದಿಸಲು ಹೋಗಿ, ತನ್ನ ಅಕ್ಕ ಲತಾಳೊಂದಿಗೆ  ವಾಪಾಸ್ಸು 3:00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಕೀ ಇಟ್ಟ ಜಾಗದಲ್ಲಿ ಇರದೇ ಇದ್ದು ಅಲ್ಲಿಯೇ ಸ್ವಲ್ಪ ದೂರದಲ್ಲಿ ಇದ್ದ ಮನೆಯ ಬೀಗವನ್ನು ತೆರೆದು ಒಳಗೆ ಹೊಕ್ಕಿದಾಗ ಮನೆಯ ಹಾಲ್ ನಲ್ಲಿ ಇದ್ದ ಕಬ್ಬಿಣದ ಕಪಾಟು ತೆರೆದಿದ್ದು, ಅದರಲ್ಲಿದ್ದ ಸ್ವತ್ತುಗಳು ಚೆಲ್ಲಾಪಿಲ್ಲಿ ಆಗಿದ್ದು ಹಾಗೂ ಮನೆಯ ಒಳಗಿದ್ದ ಕಬ್ಬಿಣದ ಕಪಾಟು ಬಲಾತ್ಕಾರವಾಗಿ ತೆರೆದಂತಿದ್ದು, ರೋಹಿಣಿ ಯವರು ಕಪಾಟಿನಲ್ಲಿಟ್ಟಿದ್ದ ಚಿನ್ನ  ಮತ್ತು ನಗದು ರೂಪಾಯಿ 10500/- ರನ್ನು ಹುಡುಕಾಡಿದಾಗ  ಇರಲಿಲ್ಲ ಎನ್ನಲಾಗಿದೆ. ಯಾರೋ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಕೀ ಬಳಸಿ ಮನೆಯ ಒಳಗೆ ಹೊಕ್ಕು ಕಪಾಟುಗಳ ಬಾಗಿಲುಗಳನ್ನು ಬಲಾತ್ಕಾರವಾಗಿ ತೆರೆದು ಕಪಾಟಿನಲ್ಲಿದ್ದ ರೂಪಾಯಿ 10,500/- ನಗದು ಹಾಗೂ 30 ಗ್ರಾಂ ತೂಕದ ಹಳೆಯ ಹಾಗೂ ಎರಡು ವರ್ಷದ ಹಿಂದೆ ಖರೀದಿಸಿದ ½ ಪವನ್ ತೂಕದ ಚಿನ್ನದ ಬೆಂಡೋಲೆ-1 ಜೊತೆ, ತಲಾ 1 ಪವನ್ ತೂಕದ ಚಿನ್ನದ ಚೈನ್-2, ½ ಪವನ್ ತೂಕದ ಚಿನ್ನದ ಬ್ರಾಸ್ಲೈಟ್-1, ¾  ಪವನ್ ತೂಕದ ಚಿನ್ನದ ಉಂಗುರ-2 ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿಕೊಂಡಿದ್ದಾರೆ.. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 75,000/- ರೂಪಾಯಿ ಮತ್ತು ನಗದು 10,500/- ರೂಪಾಯಿ ಆಗಿರುತ್ತದೆ ಎನ್ನಲಾಗಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

error: No Copying!