ಬ್ರಹ್ಮಾವರ: ಏಪ್ರಿಲ್ ೨೯(ಹಾಯ್ ಉಡುಪಿ ನ್ಯೂಸ್) ನಾಯಿ ಯನ್ನು ಮನೆಯಿಂದ ಹೊರ ಹಾಕಿದರು ಎಂದು ತಂದೆಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಉಡುಪಿ ತಾಲೂಕು,ಬೆಳ್ಳಂಪಳ್ಳಿ ಗ್ರಾಮದ ,ಮೂಡುತೋನ್ಸೆಬೆಟ್ಟು ನಿವಾಸಿ ಉಷಾಲತಾ ಎ ಶೆಟ್ಟಿ ಇವರ ತಂದೆ ದಾಸಪ್ಪ ಹೆಗ್ಡೆ ರವರು ದಿನಾಂಕ 27/04/2022 ರಂದು ಮನೆಯಲ್ಲಿ ಇದ್ದ ನಾಯಿಯು ಗಲೀಜು ಮಾಡಿದ್ದರಿಂದ ನಾಯಿಯನ್ನು ಹೊರಗೆ ಓಡಿಸಿದ್ದು, ಇದೇ ಕಾರಣಕ್ಕೆ ಉಷಲತಾ ಶೆಟ್ಟಿ ಅಣ್ಣನಾದ ಆಶಿಶ್ ಕುಮಾರ್ ಹೆಗ್ಡೆ ಯವರು ಬೆಳಿಗ್ಗೆ 11:00 ಗಂಟೆಗೆ ಅವರ ತಂದೆ ದಾಸಪ್ಪ ಹೆಗ್ಡೆ ರವರಿಗೆ ಕೈಯಿಂದ ಎಡಕಿವಿ, ಬೆನ್ನು ಹಾಗೂ ಎರಡೂ ಕಾಲಿಗೆ ಹೊಡೆದಿದ್ದು, ಈ ಹಲ್ಲೆಯಿಂದ ದಿನಾಂಕ 28/04/2022 ರಂದು ದಾಸಪ್ಪ ಹೆಗ್ಡೆರವರಿಗೆ ಮೈ ಕೈ ನೋವು ಜಾಸ್ತಿ ಆಗಿದ್ದರಿಂದ ಉಷಲತಾ ಶೆಟ್ಟಿ ತಂದೆಯನ್ನು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ತಂದೆಯ ಮನೆ ಬಾಳ್ತಾರಿಗೆ ಕರೆದುಕೊಂಡು ಹೋಗಿ ಅಲ್ಲಿ ಮನೆಯಲ್ಲಿ ಇರುವಾಗ ಮಧ್ಯಾಹ್ನ 1:00 ಗಂಟೆಗೆ ಆಶಿಷ್ ಕುಮಾರ್ ಹೆಗ್ಡೆ ಮನೆಗೆ ಬಂದು ಉಷಲತಾ ಶೆಟ್ಟಿಯವರನ್ನು ನೋಡಿ ಅವಾಚ್ಯವಾಗಿ ಬೈದು ಅವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ ಎನ್ನಲಾಗಿದೆ. ಅಲ್ಲದೆ ಆಶಿಷ್ ಕುಮಾರ್ ಹೆಗ್ಡೆ ಉಷಲತಾರಿಗೆ ಹೊಡೆಯಲು ಬಂದಾಗ ಅವರ ತಂದೆ ತಪ್ಪಿಸಲು ಬಂದಿದ್ದು, ಅವರಿಗೂ ಕೂಡ ಬಾಯಿಗೆ ಬಂದಂತೆ ಬೈದು ಇಬ್ಬರನ್ನೂ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎನ್ನಲಾಗಿದೆ. ಉಷಲತಾರವರು ಅವರ ತಂದೆಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಆಶಿಷ್ ಕುಮಾರ್ ಹೆಗ್ಡೆಯು ಉಷಲತಾರಿಗೆ ಹಲ್ಲೆ ಮಾಡಿರುವುದಾಗಿ ಉಷಲತಾರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ