ಮಣಿಪಾಲ: ಏಪ್ರಿಲ್ ೨೮(ಹಾಯ್ ಉಡುಪಿ ನ್ಯೂಸ್) ಟೂರಿಸ್ಟ್ ಕಾರೊಂದನ್ನು ಬಾಡಿಗೆಯ ನೆಪದಲ್ಲಿ ಕರೆದೊಯ್ದು ಚಾಲಕನನ್ನು ಥಳಿಸಿ ದರೋಡೆ ನಡೆಸಿದ ಘಟನೆ ನಡೆದಿದೆ.
ಉಡುಪಿ ತಾಲೂಕು, ೮೦ ಬಡಗಬೆಟ್ಟು ಗ್ರಾಮ, ಶಾಂತಿ ನಗರ ೧ ನೇ ಕ್ರಾಸ್ ನಿವಾಸಿ ಶ್ರೀಧರ ಭಕ್ತ (೬೧) ಇವರು ಮಣಿಪಾಲದಲ್ಲಿ KA20A-A-0348 Itios ಕಾರನ್ನು ಬಾಡಿಗೆಗೆ ಇಟ್ಟುಕೊಂಡಿದ್ದು, ದಿನಾಂಕ : 27.04.2022 ರಂದು ಕಾರು ಬಾಡಿಗೆ ಮಾಡಲೆಂದು ಮಣಿಪಾಲಕ್ಕೆ ಬಂದು ಟೈಗರ್ ಸರ್ಕಲ್ ಬಳಿ ಸ್ಟ್ಯಾಂಡ್ ನಲ್ಲಿ ಲೈನ್ ನಲ್ಲಿ ನಿಲ್ಲಿಸಿದ್ದು, ಬಾಡಿಗೆಗೆ ಸರದಿ ಬಂದಾಗ ಸಮಯ ಸುಮಾರು ಸಂಜೆ 4.25 ಗಂಟೆಗೆ ಸುಮಾರು 35 ರಿಂದ 45 ವರ್ಷ ಪ್ರಾಯದ 4 ಜನ ತುಳು ಮಾತನಾಡುವ ವ್ಯಕ್ತಿಗಳು ಶ್ರೀಧರ ಭಕ್ತ ರ ಕಾರಿನ ಬಳಿ ಬಂದು ನಮಗೆ ಕಾರವಾರಕ್ಕೆ ಹೋಗಲು ಇದೆ ಎಷ್ಟು ಬಾಡಿಗೆ ಎಂದು ಶ್ರೀಧರ ಭಕ್ತರಲ್ಲಿ ಕೇಳಿದಾಗ 5,800/- ರೂಪಾಯಿ ಕೊಡಿ ಎಂದು ಹೇಳಿ, ಒಪ್ಪಿಸಿ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾ ರಾತ್ರಿ 08.40 ಗಂಟೆಗೆ ಅಂಕೋಲ ರೈಲ್ವೇ ಸ್ಟೇಷನ್ ಸಮೀಪ ಕಾರನ್ನು ಪ್ರಯಾಣಿಕರು ನಿಲ್ಲಿಸಲು ಹೇಳಿದಾಗ ಶ್ರೀಧರ ಭಕ್ತರು ಕಾರನ್ನು ನಿಲ್ಲಿಸಿದಾಗ ಕಾರಿನಲ್ಲಿ ಹಿಂಬದಿಯಲ್ಲಿದ್ದ ಒಬ್ಬ ವ್ಯಕ್ತಿಯು ಶ್ರೀಧರ ಭಕ್ತರ ಕುತ್ತಿಗೆಯನ್ನು ಒತ್ತಿ ಕೈಯಿಂದ ಲಾಕ್ ಮಾಡಿದ್ದು, ಉಳಿದ 3 ಜನರು ಶ್ರೀಧರ ಭಕ್ತರನ್ನು ಡ್ರೈವರ್ ಸೀಟ್ ನಿಂದ ಬಲಾತ್ಕಾರವಾಗಿ ಹಿಂದಿನ ಸೀಟ್ ಗೆ ಎಳೆದು ಕುಳ್ಳಿರಿಸಿ ಶ್ರೀಧರ ಭಕ್ತರ ಕುತ್ತಿಗೆಯನ್ನು ಒತ್ತಿ ಹಿಡಿದು ಕಾಲಿನಿಂದ ಒದ್ದು ಅವರ ಬಳಿ ಇದ್ದ ಚೂರಿಯನ್ನು ಶ್ರೀಧರ ಭಕ್ತರ ಹೊಟ್ಟೆಯ ಬಳಿ ಒತ್ತಿ ಹಿಡಿದು ನಿನ್ನಲ್ಲಿ ಇರುವ ಎಲ್ಲಾ ದುಡ್ಡು ತೆಗೆದುಕೊಡು ಇಲ್ಲ ಅಂದರೆ ಇಲ್ಲಿಯೇ ನಿನ್ನನ್ನು ಚೂರಿಯಿಂದ ಇರಿದು ಕೊಂದು ಹಾಕುವುದಾಗಿ ಹೇಳಿದಾಗ ಶ್ರೀಧರ ಭಕ್ತರು ಪರ್ಸ್ ನಲ್ಲಿದ್ದ 3,000/- ರೂಪಾಯಿ ಹಾಗೂ ಕೈಯಲ್ಲಿದ್ದ ಒರೈಮ್ ವಾಚ್ ನ್ನು ತಗೆದುಕೊಟ್ಟಿರುತ್ತಾರೆ, ಬಳಿಕ ಕಾರಿನಲ್ಲಿದ್ದ ಒಬ್ಬ ವ್ಯಕ್ತಿಯು ಕಾರನ್ನು ಚಲಾಯಿಸಿಕೊಂಡು ರಾತ್ರಿ 11.30 ಗಂಟೆಗೆ ಕುಂದಾಪುರದ ಆನೆಗುಡ್ಡೆಗೆ ತಲುಪುವಾಗ ಎ.ಟಿ.ಎಂ ಬಳಿ ಕಾರನ್ನು ನಿಲ್ಲಿಸಿ ಎ.ಟಿ.ಎಂ ನಿಂದ ದುಡ್ಡು ತೆಗೆದು ತರುವಂತೆ ಶ್ರೀಧರ ಭಕ್ತರಲ್ಲಿ ಹೇಳಿ, ಏನಾದರು ಕಿತಾಪತಿ ಮಾಡಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಹೆದರಿಸಿದ್ದು, ಶ್ರೀಧರ ಭಕ್ತರು ಕಾರಿನಿಂದ ಇಳಿದು ಎ.ಟಿ.ಎಂ ನ ಒಳಗೆ ಹೋಗಿ ಬಳಿಕ ಹೊರಗೆ ಬಂದು ಸ್ಥಳದಿಂದ ಓಡಿ ಹೋಗಿ ಪರಾರಿಯಾಗಿರುತ್ತಾರೆ ಎಂದು ದೂರು ನೀಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.