Spread the love

ಪಡುಬಿದ್ರಿ: ಏಪ್ರಿಲ್ ೨೭(ಹಾಯ್ ಉಡುಪಿ ನ್ಯೂಸ್) ಹುಡುಗಿ ಯ ಜೊತೆಗಿನ ಫೋಟೋ ಶಾಪ್ ಮಾಡಿದ ಫೋಟೋ ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಬಗ್ಗೆ ದೂರಲಾಗಿದೆ.

ದಿನಾಂಕ:05.03.2022 ರಂದು ಬೆಳಗ್ಗೆ 11:45 ಗಂಟೆಗೆ ಕಲಂಧರ್ ಶಾಫಿ, (36 ) ಎಮ್.ಎಸ್. ಕ್ವಾಟೇಜ್ ಆಭರಣ ಮೋಟಾರ್ಸ್ ಶೋ ರೂಮ್ ಎದುರು ನಡ್ಸಾಲು ಗ್ರಾಮ ಇವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ- ಕಾರ್ಕಳ ಜಂಕ್ಷನ್‌ಬಳಿಯ  ತನ್ನ  ಎಂ. ಎಸ್. ಹಣ್ಣು ಹಂಪಲು ಮತ್ತು ತರಕಾರಿ ಅಂಗಡಿಯಲ್ಲಿರುವಾಗ ಮೊಹಮ್ಮದ್ ಇಲಿಯಾಸ್ ಮತ್ತು ಜೀನತ್ ಎಂಬವರು ಏಕಾಏಕಿ ಅಂಗಡಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ಪಂಚಾಯತ್ ಸದಸ್ಯ ಆದ ನಂತರ ಬಹಳ ಹಾರಾಡುತ್ತೀಯಾ ನಿನ್ನನ್ನು ಯಾವ ರೀತಿ ಮಟ್ಟ ಹಾಕಬೇಕು ಎಂದು ನಮಗೆ ಗೊತ್ತಿದೆ, ನಾವು  ಕೇಳಿದ ಹಣ ಕೊಡದೇ ಇದ್ದರೆ ನಿನ್ನನ್ನು ದಿನೇಶ್ ಸನಿಲ್ ಮಾನಂಪಾಡಿ ಎಂಬವನನ್ನು ಪಡುಬಿದ್ರಿ ಪೇಟೆಯಲ್ಲಿ ಹೊಡೆದು ಸಾಯಿಸಿದ ಹಾಗೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಲಾಗಿದೆ.

ದಿನಾಂಕ:14.04.2022 ರಂದು  ಸಂಜೆ 04:00 ಗಂಟೆಗೆ ಹಮೀದ್ ಪಡುಬಿದ್ರಿ, ಯತೀಶ್ ಎಂಬವರ ಬಳಿ ಬಂದ ಮೊಹಮ್ಮದ್ ಇಲಿಯಾಸ್ ಮತ್ತು ಜೀನತ್ ;ಕಲಂದರ್ ಶಾಫಿ ಮತ್ತು ಒಂದು ಹುಡುಗಿ ಪೋಟೋ ಶಾಪ್ ಮಾಡಿದ ಪೋಟೋವನ್ನು ತೋರಿಸಿ, ರೂ.5,00,000/- ನೀಡದಿದ್ದಲ್ಲಿ ನಾಳೆ ಪತ್ರಿಕಾ ಮಾದ್ಯಮ ಮತ್ತು ದೃಶ್ಯ ಮಾದ್ಯಮಕ್ಕೆ ಫೋಟೋ  ಹಾಕಿಸುತ್ತೇವೆಂದು  ಹೇಳಿ ಹೋಗಿದ್ದು, ಕಲಂದರ್ ಶಾಫಿ ಹಣ ನೀಡದ ಕಾರಣ ಅವರನ್ನು ಬ್ಲಾಕ್ ಮೇಲ್ ಮಾಡಿ ಹಣ ದೋಚುವ ಉದ್ದೇಶದಿಂದ ದಿನಾಂಕ:15/04/2022 ರಂದು ಇವರೀರ್ವರು ಉಡುಪಿಯ ಪತ್ರಿಕಾ ಗೋಷ್ಠಿಯಲ್ಲಿ ಪೋಟೋದಲ್ಲಿ ಇರುವ ಹುಡುಗಿಗೂ ಕಲಂದರ್ ಶಾಫಿಗೂ ಸಂಬಂಧವಿದೆ ಎಂದು ಹೇಳಿಕೆ ನೀಡಿರುತ್ತಾರೆ.   ಮೊಹಮ್ಮದ್ ಇಲಿಯಾಸ್ ಮತ್ತು ಜೀನತ್ ಇವರು ಹಿಂದಿನಿಂದಲೂ ಜನರನ್ನು ಬ್ಲಾಕ್ ಮೇಲ್ ಮಾಡಿ ಒಂದಲ್ಲ ಒಂದು ರೀತಿಯಲ್ಲಿ ಹಣ ದೋಚುವ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಇವರೀರ್ವರ ಮೇಲೂ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ತನಿಖೆಗೆ ಬಾಕಿ ಇರುತ್ತದೆ. ಆದುದರಿಂದ ಇವರಿಬ್ಬರೂ ವಂಚನೆಯಿಂದ ಬೆದರಿಸಿ ಬಲತ್ಕಾರದಿಂದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಪೋಟೋಶಾಪ್ ಮಾಡಿ ಕಲಂದರ್ ಶಾಫಿ ಗೆ ರೂ.5,00,000/- ಹಣಕ್ಕೆ ಬೆದರಿಕೆ ಹಾಕಿರುತ್ತಾರೆ ಎಂದು ದೂರು ನೀಡಲಾಗಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

error: No Copying!