Spread the love

ಕುಂದಾಪುರ: ಏಪ್ರಿಲ್ ೨೭ (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಶಾಂತಿ ಭಂಗ ಮಾಡುತ್ತಿದ್ದ ಕಿಡಿಗೇಡಿಗಳು ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ದಿನಾಂಕ 26/04/2022 ರಂದು ಸಂಜೆ ಕಂಡ್ಲೂರು ಗಂಗಾ ವೈನ್ಸ್‌ಬಳಿ ರಸ್ತೆಯಲ್ಲಿ 2 ಜನ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ಕುಂದಾಪುರ ಗ್ರಾಮಾಂತರ ಠಾಣೆಗೆ ಮಾಹಿತಿ ಬಂದ ಮೇರೆಗೆ ಠಾಣಾ ಸಿಬ್ಬಂದಿಯವರು ಕಾವ್ರಾಡಿ ಗ್ರಾಮದ ಕಂಡ್ಲೂರು ಸೌಕೂರು ರಸ್ತೆಯಲ್ಲಿ ಗಂಗಾ ವೈನ್‌ಶಾಪ್ ಬಳಿ ಬಂದು ನೋಡುವಾಗ ಗಂಗಾ ವೈನ್ಸ್‌‌‌ಮುಂಬದಿ ರಸ್ತೆಯಲ್ಲಿ 2 ಜನ ಜೋರಾಗಿ ಕೂಗಾಡುತ್ತ, ರಸ್ತೆಯಲ್ಲಿ ಬರುವ ಸಾರ್ವಜನಿಕರನ್ನು ಮತ್ತು ವಾಹನಗಳನ್ನು ಸಂಚರಿಸದಂತೆ ತಡೆಯೊಡ್ಡಿ ಸಾರ್ವಜನಿಕ ಶಾಂತಿಭಂಗವುಂಟು ಮಾಡುತ್ತಿದ್ದುದನ್ನು ಕಂಡು ಅವರ ಬಳಿ ಹೋಗಿ ಅವರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ವಿನಂತಿಸಿಕೊಂಡಿರುತ್ತಾರೆ. ಈ ಸಮಯ ಕೇರಳ ರಾಜ್ಯ,ಫಝಂಗಲಮ್ ಕೊಲ್ಲಂ,ಮನುವಿಲಾಸಂ ನಿವಾಸಿ ಮನೀಶ ಎಂ (೨೩) , ಕೇರಳ ರಾಜ್ಯ,ಕೊಲ್ಲಂ, ಪ್ರತಿಭಾ ಭವನಂ ನಿವಾಸಿ ರಾಜೀವ (೩೭) ಇವರು ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರ ಸಮವಸ್ತ್ರವನ್ನು ಎಳೆದು, ಕೈಯಿಂದ ಹೊಡೆದು ಹಲ್ಲೆ ನಡೆಸಿ, ಸ್ಥಳದಲ್ಲಿ ಸಾರ್ವಜನಿಕ ಶಾಂತಿಭಂಗ ಉಂಟಾಗುವುದನ್ನು ತಡೆಯಲು ಇಲಾಖಾ ಸಮವಸ್ತ್ರದಲ್ಲಿ ವಿಧಿಬದ್ದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ರನ್ನು ತಳ್ಳಾಡಿ , ಕೈಯಿಂದ ಹೊಡೆದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

error: No Copying!