images-4.jpeg
Spread the love

ಮಲ್ಪೆ: ದಿನಾಂಕ: 17/12/2025 (ಹಾಯ್ ಉಡುಪಿ ನ್ಯೂಸ್) ಮೂಡುಬೆಟ್ಟು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಮಲ್ಪೆ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಕೆ ಅವರು ಬಂಧಿಸಿದ್ದಾರೆ.

ಮಲ್ಪೆ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್‌ ಕೆ, ಅವರು ದಿನಾಂಕ:16-12-2025 ರಂದು ಕೊಡವೂರು ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಧ್ವನಗರ ಮೂಡುಬೆಟ್ಟು ಎಂಬಲ್ಲಿ ಬಸ್‌ ನಿಲ್ದಾಣ ಬಳಿಯ ಸಾರ್ವಜನಿಕ ಸ್ಥಳದಲ್ಲಿ 3-4 ಜನ ಸೇರಿಕೊಂಡು ಏನೊ ಮಾತನಾಡಿಕೊಳ್ಳುತ್ತಿರುವುದನ್ನು ಕಂಡು ವಾಹನವನ್ನು ನಿಲ್ಲಿಸಿದಾಗ ಅಲ್ಲಿ ನಿಂತುಕೊಂಡಿದ್ದ ಜನರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿರುತ್ತಾರೆ.

ಹರೀಶ್ ಕೆ ಅವರು ಕೂಡಲೇ ವಾಹನದಿಂದ ಇಳಿದು ಅಲ್ಲೇ ನಿಂತಿದ್ದ ಓರ್ವನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿದಾಗ ಭಾಸ್ಕರ ಬೆಳ್ಚಾಡ (45), ಕೊಡವೂರು ಗ್ರಾಮ ಉಡುಪಿ ಎಂಬುದಾಗಿ ತಿಳಿಸಿರುತ್ತಾನೆ.

ಆತನ ಕೈಯಲ್ಲಿದ್ದ ಚೀಟಿ ಏನು ಎಂದು ಕೇಳಿದಾಗ ರತ್ನಾಕರ ಎಂಬಾತ ತಿಳಿಸಿದಂತೆ ನಾನು ಮಟ್ಕಾ ಜುಗಾರಿ ಚೀಟಿ ಮತ್ತು ಮಟ್ಕಾ ಜುಗಾರಿಗೆ ಸಂಗ್ರಹಿಸಿದ ಹಣ ಎಂದು ತಿಳಿಸಿದ್ದು, ಈ ಮಟ್ಕಾ ಜುಗಾರಿ ಆಟದಲ್ಲಿ 00 ರಿಂದ 99 ರ ಒಳಗಿನ ನಂಬರ್‌ಗೆ ಜನರು ನೀಡಿದ 1 ರೂಪಾಯಿಗೆ 70 ರೂಪಾಯಿ ಹಣ ನೀಡುವುದಾಗಿ ತಿಳಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿಕೊಳ್ಳುತ್ತೇನೆ. ಈ ಮಟ್ಕಾ ಜುಗಾರಿಯಿಂದ ಬಂದ ಹಣವನ್ನು ಆಯಾ ದಿನದ ಸಂಜೆ ಸ್ವಲ್ಪ ಹಣ ನಾನು ಇಟ್ಟುಕೊಂಡು ಉಳಿದ ಹಣವನ್ನು ರತ್ನಾಕರ ಗೆ ನೀಡಿರುತ್ತೇನೆ ಹಣವನ್ನು ಅವರು ಏನು ಮಾಡುತ್ತಾರೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದು ,ಭಾಸ್ಕರ ಬೆಳ್ಚಾಡನನ್ನು ಮುಂದಿನ ವಿಚಾರಣೆಗಾಗಿ ಬಂಧಿಸಿ ಆತನ ಬಳಿಯಿದ್ದ ರೂಪಾಯಿ 490/- ಹಣ, ಮಟ್ಕಾ ನಂಬ್ರಗಳನ್ನು ಬರೆದಿರುವ ಚೀಟಿ-1 ಮತ್ತು ಬಾಲ್‌ಪೆನ್‌‌-1 ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ:112 BNS & 78(i)(iii)KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!