ಉಡುಪಿ: ದಿನಾಂಕ :17-12-2025(ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ನಿವಾಸಿ ಸೀತಾ ನಾಯಕ್ (66) ಎಂಬವರು ಕಾಣೆಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನಲ್ಲಿರುವ ಸಾಯಿ ರಾಧಾ ನೆಸ್ಟ್ ಅಪಾರ್ಟಮೆಂಟ್ ನಲ್ಲಿ ವಾಸಮಾಡಿಕೊಂಡಿರುವ ಸೀತಾನಾಯಕ್ (66) ಎಂಬವರು ಮಾನಸಿಕ ಖಿನ್ನತೆಯನ್ನು ಹೊಂದಿದ್ದು , ದಿನಾಂಕ 16/12/2025 ರಂದು ಮಧ್ಯಾಹ್ನ ಅಪಾರ್ಟಮೆಂಟಿನ ಗೇಟ್ ನಿಂದ ಹೊರಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಕಂಡು ಬಂದಿರುತ್ತದೆ. ನಂತರ ಸೀತಾ ನಾಯಕ್ ರವರು ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ ಎಂದು ಅಮ್ರತಾ ನಾಯಕ್ ಎಂಬವರು ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿದೆ.
