IMG_20251216_200432.jpg
Spread the love

ಬೈಂದೂರು: ದಿನಾಂಕ:16-12-2025(ಹಾಯ್ ಉಡುಪಿ ನ್ಯೂಸ್) ಶಿರೂರು ಕಡೆಯಿಂದ ಕುಂದಾಪುರ ಕಡೆಗೆ  ಅಕ್ರಮವಾಗಿ ಕಳ್ಳತನ ನಡೆಸಿದ ದನ ಸಾಗಾಟ ನಡೆಸುತ್ತಿದ್ದ ಮಾರುತಿ ಕಾರನ್ನು ಬೆನ್ನಟ್ಟಿದ ಬೈಂದೂರು ಪೊಲೀಸ್‌ ಠಾಣೆಯ ಪಿಎಸ್ಐ ನವೀನ್ ಪಿ ಬೋರಕರ್ ಅವರು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯ ಪಿ ಎಸ್‌ ಐ ನವೀನ್‌ ಪಿ. ಬೋರಕರ್‌ ರವರು ದಿನಾಂಕ 15.12.2025 ರಂದು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ದಿನಾಂಕ 16.12.2025 ರಂದು ಬೆಳಗಿನ ಜಾವ ಸುಮಾರು 4.00 ಗಂಟೆಗೆ ಯಡ್ತರೆ ಕ್ರಾಸ್‌ನಲ್ಲಿರುವಾಗ ಶಿರೂರು ಕಡೆಯಿಂದ ರಾ.ಹೆ 66 ರಲ್ಲಿ ಕುಂದಾಪುರ ಕಡೆಗೆ KA.05.MF.787 ನೇ ಮಾರುತಿ ಬೆಲನೋ ಕಾರಿನಲ್ಲಿ ದನವನ್ನು ಕಳ್ಳತನ ಮಾಡಿ ತುಂಬಿಕೊಂಡು ಸಾಗಾಟ ಮಾಡುತ್ತಿರುವುದಾಗಿ ಗುಪ್ತ ಮಾಹಿತಿ ಬಂದಿದ್ದು , ಪಿಎಸ್ಐ ಯವರು  ಹೈವೆ ಮೊಬೈಲ್‌ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಠಾಣಾ ಸಿಬ್ಬಂದಿಯೊಂದಿಗೆ ಅಲ್ಲಿಗೆ ಬಂದಿದ್ದು ಸುಮಾರು ಬೆಳಿಗ್ಗೆ 4:30 ಗಂಟೆಗೆ ರಾ.ಹೆ 66 ರಲ್ಲಿ ಶಿರೂರು ಕಡೆಯಿಂದ ಮಾಹಿತಿ ಬಂದ ಕಾರನ್ನು ಪಿಎಸ್ಐ ಯವರು ಹಾಗೂ ಸಿಬ್ಬಂದಿಗಳು ಯಡ್ತರೆ ಜಂಕ್ಷನ್‌ ಸಮೀಪ ಬರುವಾಗ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಪೊಲೀಸರು ಸೂಚನೆ ನೀಡಿದರೂ ಸಹ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿ ಕೊಂಡು ಹೋಗಿದ್ದು ಕೂಡಲೇ ಪಿಎಸ್ಐ ಯವರು ಸಿಬ್ಬಂದಿಯೊಂದಿಗೆ  ಜೀಪು ಹಾಗೂ ಹೈವೆ ಮೊಬೈಲ್‌ ವಾಹನದೊಂದಿಗೆ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಾಗ  ಕಾರು ಕಂಬದಕೊಣೆ ಜಂಕ್ಷನ್‌ ನಿಂದ ಒಳಗೆ ಹೋಗಿ ರೈಲ್ವೆ ಗೇಟ್‌ ಹತ್ತಿರ ಎಡಕ್ಕೆ ಕಚ್ಚಾ ರಸ್ತೆ ಯಲ್ಲಿ ಹೋಗಿ ಶ್ರೀ ಗೊವಿಂದ ದೇವಸ್ಥಾನ ಹರಿಕೇರೆ ಮನೆಯ ಹತ್ತಿರ ಹಾಡಿಯಲ್ಲಿ ಕಾರನ್ನು ಬಿಟ್ಟು ಕಾರಿನಲ್ಲಿ ಇದ್ದ ಇಬ್ಬರು ಓಡಿ ಹೋಗಿರುತ್ತಾರೆ.

ಪಿಎಸ್ಐ ಯವರು ಹೋಗಿ ಕಾರನ್ನು ಪರಿಶೀಲಿಸಿದಾಗ KA.05.MF.0787 ನೇ ಮಾರುತಿ ಬೆಲೇನೋ ಗ್ರೇ ಬಣ್ಣದ ಕಾರಾಗಿದ್ದು ಕಾರಿನ ಹಿಂದಿನ ಸೀಟನ್ನು ಮಡಚಿ ನೀಲಿ ಬಣ್ಣದ ಟಾರ್ಪಾಲ್‌ ಹಾಸಿ ಒಂದು ದನದ ಕಾಲು ಮತ್ತು ಕುತ್ತಿಗೆ ಒಟ್ಟಿಗೆ ಕಟ್ಟಿ ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡು ಬಂದಿದ್ದು ಕಾರಿನಲ್ಲಿದ್ದ ಆರೋಪಿಗಳು ಎಲ್ಲಿಂದಲೋ ದನವನ್ನು ಕಳವು ಮಾಡಿಕೊಂಡು ಬಂದು ಕೊಂದು ಮಾಂಸ ಮಾಡುವ ಉದ್ದೇಶದಿಂದ ಮಾರುತಿ ಬೆಲೆನೊ ಕಾರಿನಲ್ಲಿ ಹಿಂಸ್ಮಾತಕವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

ದನವನ್ನು ಪೊಲೀಸರು ನೋಡಿದಾಗ ಅದು ಕಂದು ಮಿಶ್ರಿತ ಕಪ್ಪು ಬಣ್ಣದ ದನವಾಗಿದ್ದು ಅದರ ಅಂದಾಜು ಮೌಲ್ಯ 5,000/- ರೂ ಕಾರಿನ ಮೌಲ್ಯ ಸುಮಾರು 4ಲಕ್ಷ ರೂ ಆಗಬಹುದು. ಆರೋಪಿಗಳು  KA.05.MF.787 ನೇ ಮಾರುತಿ ಬೆಲನೋ ಕಾರಿನಲ್ಲಿ ಎಲ್ಲಿಂದಲೋ ದನವನ್ನು ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆ ಇಲ್ಲದೇ ತುಂಬಿಸಿಕೊಂಡು ಸಾಗಾಟ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ   ಕಲಂ 303(2) BNS-2023 & SEC 4,5,7,12 Karnataka Prevention of Slaughter and Preservation of Cattle,(Transportation of cattle) Rules- 2021(U/s-and U/s 11(1)D Prevenation of cruelty animal INDIAN MOTOR VEHICLES ACT, 1988 (U/s-66,192(A))ರಂತೆ  ಪ್ರಕರಣ ದಾಖಲಾಗಿದೆ.

error: No Copying!