IMG-20241220-WA00051.jpg
Spread the love

ದಿನಾಂಕ:16-12-2025(ಹಾಯ್ ಉಡುಪಿ ನ್ಯೂಸ್) ಕಳೆದ

ಐದು ವರ್ಷಗಳಿಂದ ಉಡುಪಿ ನಗರಸಭೆಯ ಆಡಳಿತ, ಬಿಜೆಪಿಯ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಇಲ್ಲದ
ಆಡಳಿತಕ್ಕೆ ಸಾಕ್ಷಿಯಾಗಿದೆ ;ಅದನ್ನು ಮರೆಮಾಚಲು ನಗರಸಭೆಯ ಅಧಿಕಾರಿಗಳ ಸಹಿತ ನಗರ ಸಭೆಯ ನೌಕರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಉಡುಪಿಯ ಜನರನ್ನು  ಮೋಸಗೊಳಿಸುವ ತಂತ್ರವನ್ನು ಬಿಜೆಪಿಯ ಮಾಜಿ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರು ಮಾಡುತ್ತಿದ್ದಾರೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.

ಐದು ವರ್ಷಗಳಿಂದ ಉಡುಪಿ ನಗರಸಭೆ ಆಡಳಿತ ಬಿಜೆಪಿಯ ಆಡಳಿತಕ್ಕೆ ಒಳಗಾಗಿದ್ದು ಈ ಸಂದರ್ಭದಲ್ಲಿ ಯಾವುದೇ ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣದೆ ಅಭಿವೃದ್ಧಿಹೀನ ನಗರಸಭೆ ಎಂದು ಹೆಸರು ಗಳಿಸಿದೆ .

ಈ ಬಿಜೆಪಿಯವರಿಗೆ ಐದು ವರ್ಷಗಳಲ್ಲಿ ಎರಡು ಅಧ್ಯಕ್ಷರು ಎರಡು ಶಾಸಕರುಗಳು ಈ ಬಿಜೆಪಿಯವರೇ ಆಗಿದ್ದು ,ಉಡುಪಿ ನಗರಸಭೆಯಲ್ಲಿ ಈ ಬಿಜೆಪಿಯವರ ಭ್ರಷ್ಟಾಚಾರ ತುಂಬಿ ತುಳುಕಿದ್ದು . ನಗರಸಭೆಯನ್ನು ಗುಡಿಸಿ ಗುಂಡಾಂತರ ಮಾಡಿದ ಈ ಬಿಜೆಪಿಯವರಿಗೆ .ಇದೀಗ ಉಡುಪಿಯ ಜನರನ್ನು ಮೋಸ ಗೊಳಿಸಲು ಜಿಲ್ಲಾಧಿಕಾರಿಯವರ ಬಳಿ ಉಡುಪಿ ನಗರಸಭೆ ಅಧಿಕಾರಿಗಳು ಹಾಗೂ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಮನವಿ ಮೂಲಕ ನೀಡಿ ಉಡುಪಿಯ ಜನರನ್ನು  ಮೋಸಗೊಳಿಸಲು ಯತ್ನಿಸುತ್ತಿದ್ದಾರೆ.

ಇದು ನಮ್ಮ ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡಿನ ಮತದಾರರು ಜನಸಾಮಾನ್ಯರು ಈ ಬಿಜೆಪಿಯವರ ಸುಳ್ಳು ಹೇಳಿಕೆಗೆ ಬೆಂಬಲಿಸದೆ ಈ ಬಿಜೆಪಿಯವರಿಗೆ ತಕ್ಕ ಉತ್ತರವನ್ನು ಮುಂದಿನ ಚುನಾವಣೆಯಲ್ಲಿ ಮತದಾನದ ಮೂಲಕ ಉಡುಪಿಯ ಜನತೆ ನೀಡಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ ರಾಜ್ಯ ಸಂಘಟನೆ ಇದರ ಅಧ್ಯಕ್ಷರೂ ಉಡುಪಿ ನಗರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಇವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಏನು

error: No Copying!