ದಿನಾಂಕ:16-12-2025(ಹಾಯ್ ಉಡುಪಿ ನ್ಯೂಸ್) ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣದ) ಉಡುಪಿ ಜಿಲ್ಲಾ ಘಟಕದ ಪ್ರಮುಖರು ಇಂದು ಉಡುಪಿ, ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಅಶೋಕ್.ಹೆಚ್. ಅವರನ್ನು ಭೇಟಿ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಗುತ್ತಿರುವ ಸಮಸ್ಯೆ ಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಆಸ್ಪತ್ರೆಗೆ ಬರುವಂತಹ ನೊಂದ ಸಾರ್ವಜನಿಕರಿಗೆ, ರೋಗಿಗಳಿಗೆ ತೊಂದರೆ ಆಗುತ್ತಿರುವ ಕುರಿತು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ತಿಳಿಸಿ ಹೇಳಿದರು. ಇನ್ನು ಮುಂದೆ ಈತರ ದುರ್ವರ್ತನೆ ಮುಂದುವರಿದರೆ ಇದಕ್ಕೆ ಕಠಿಣವಾದ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ನಡೆಸಲಾಗುವುದು ಹಾಗೂ ಏನೇ ಕ್ರಮ ಕೈಗೊಂಡರೂ ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಮುನ್ನೆಚ್ಚರಿಕೆಯನ್ನು ನೀಡಿದರು.
ಈ ವಿಷಯದ ಕುರಿತು ಜಿಲ್ಲಾ ಸರ್ಜನ್ ಅಶೋಕ್.ಹೆಚ್. ರವರು ಮಾತನಾಡಿ ನಾನು ಈ ಕೂಡಲೇ ಕ್ರಮ ಕೈಗೊಳ್ಳುತ್ತೇನೆ. ಪ್ರತಿ ತಿಂಗಳು ಸಭೆ ನಡೆಸಿ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆಯ ಮಾತನ್ನು ಕೂಡ ನೀಡಿದ್ದೇನೆ. ನಿಮಗೆ ಏನಾದರೂ ಈತರ ಕಂಡುಬಂದಲ್ಲಿ ನನಗೆ ನೇರವಾಗಿ ಬಂದು ವಿಷಯ ಮುಟ್ಟಿಸಬೇಕು ಎಂದು ಜಿಲ್ಲಾಧ್ಯಕ್ಷರಿಗೆ ತಿಳಿಸಿದರು.
ಈ ಭೇಟಿಯಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಜಿಲ್ಲಾ ಗೌರವಾಧ್ಯಕ್ಷರಾದ ಅನ್ಸರ್ ಅಹ್ಮದ್, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಜ್ಯೋತಿ ಸೇರಿಗಾರ್ತಿ,
ಜಿಲ್ಲಾ ಉಪಾಧ್ಯಕ್ಷರಾದ ಸಯ್ಯದ್ ನಿಜಾಮುದ್ದಿನ್, ಜಿಲ್ಲಾ ಗೌರವ ಸಲಹೆಗಾರರು ಜಯಪ್ರಕಾಶ್ ಶೆಟ್ಟಿ , ಜಿಲ್ಲಾ ಸದಸ್ಯರುಗಳಾದ ಖಾದರ್ ಶಿರ್ವ. ಸಿದ್ದಣ್ಣ ಎಸ್ ಪೂಜಾರಿ. ಝಬೇರ್. ಗಣೇಶ ಆಚಾರಿ. ಸವಿತಾ ಶೆಟ್ಟಿ. ರವರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
