ಉಡುಪಿ: ಏಪ್ರಿಲ್ ೨೬(ಹಾಯ್ ಉಡುಪಿ ನ್ಯೂಸ್) ಶ್ರೀ ಕೃಷ್ಣ ಮಠದ ದರ್ಶನಕ್ಕೆಂದು ಬಂದ ಭಕ್ತಾದಿಗಳ ಪರ್ಸನ್ನೇ ಚಾಣಾಕ್ಷ ತನದಿಂದ ಕಳ್ಳತನ ಮಾಡಿದ ಘಟನೆ ನಡೆದಿದೆ. ಮಹಾರಾಷ್ಟ್ರ,ಮುಂಬಯಿ ವೆಸ್ಟ್, ಠಾಣೆ ನಿವಾಸಿ ಶಾಂತಾ ಜಿ ಕುಂದರ್ ಇವರು ದಿನಾಂಕ 25/04/2022 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು ದೇವರ ದರ್ಶನ ಪಡೆದು ಊಟ ಮಾಡಿದ್ದು, ಬೆಳಿಗ್ಗೆ 11:15 ಗಂಟೆಯಿಂದ 13:10 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಯಾವುದೋ ಹರಿತವಾದ ಆಯುಧದಿಂದ ಅವರ ಬ್ಯಾಗ್‌ನ್ನು ಕತ್ತರಿಸಿ, ಅದರಲ್ಲಿದ್ದ ಪರ್ಸ್ ನ್ನು ಕಳವು ಮಾಡಿದ್ದು ಪರ್ಸ್‌ನಲ್ಲಿ ರೂಪಾಯಿ 1,40,000/- ಮೌಲ್ಯದ 30 ಗ್ರಾಂ ತೂಕದ ಹವಳದ ಸರ, ಆಧಾರ್‌ಕಾರ್ಡ್, ಪಾನ್‌ಕಾರ್ಡ್, ಸ್ವೈಪ್ ಕಾರ್ಡ್ ಹಾಗೂ ರೂಪಾಯಿ 4,000/- ನಗದು ಇದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 1,44,000/- ಆಗಿರುತ್ತದೆ ಎಂದು ದೂರು ನೀಡಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ