ಕಾರ್ಕಳ: ಏಪ್ರಿಲ್ ೨೬(ಹಾಯ್ ಉಡುಪಿ ನ್ಯೂಸ್)ನಲ್ಲೂರು ನಿವಾಸಿ ವ್ರದ್ಧರೋರ್ವರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ವಸಂತ ಶೆಟ್ಟಿ, (72) ಬೆಳ್ಳಿಬೆಟ್ಟು ಮನೆ ನಲ್ಲೂರು ಗ್ರಾಮ, ಕಾರ್ಕಳ ತಾಲೂಕು, ಇವರು ದಿನಾಂಕ 24/04/2022 ರಂದು ಸಂಜೆ 6 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಬೆಳ್ಳಿಬೆಟ್ಟು ಎಂಬಲ್ಲಿ ಇರುವ ತನ್ನ ಶೆಡ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಆಶ್ರಯ ಸಫಲಿಗ, ಬಾಬು ವಸಂತ ಶೆಟ್ಟಿ ಮತ್ತೆ ಇನ್ನಿಬ್ಬರು ವಸಂತ ಶೆಟ್ಟಿ ರವರ ಶೆಡ್ ನೊಳಗಡೆ ಅಕ್ರಮ ಪ್ರವೇಶ ಮಾಡಿ ವಸಂತ ಶೆಟ್ಟಿ ಅವರನ್ನು ಉದ್ದೇಶಿಸಿ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ ವಸಂತ ಶೆಟ್ಟಿ ರವರ ಮೈಕೈಗೆ ಗುದ್ದಿದ್ದು ಅಲ್ಲದೆ ಆಶ್ರಯ ಸಫಲಿಗನು ಇವರ ಎರಡು ಕೆನ್ನೆಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿದ ಪರಿಣಾಮ ವಸಂತ ಶೆಟ್ಟಿ ರವರು ನೆಲಕ್ಕೆ ಬಿದ್ದಿದ್ದು ಅವರಿಗೆ ಈ ಮೊದಲೇ ಅಪಘಾತ ಆಗಿ ಗಾಯಗೊಂಡಿದ್ದ ಬಲ ಕಾಲಿಗೆ ಪುನಃ ನೋವು ಉಂಟಾಗಿದ್ದು ಅಲ್ಲದೆ ಬಲ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು, ಜೀವಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರು ನೀಡಿದ್ದು,ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.