ಉಡುಪಿ: ಏಪ್ರಿಲ್ ೨೬ (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಹಣಕ್ಕಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ದೂರು ನೀಡಿದ್ದಾರೆ.
ಶ್ರೀಮತಿ ಸುಜಾತಾ ಪೂಜಾರ್ತಿ (36 ) ಗಂಡ: ಗಣೇಶ್ ಪೂಜಾರಿ ,ಕಾಳಿಂಗ ರಾವ್ ರಸ್ತೆ, ಪಾಂಡೇಶ್ವರ ,ಸಾಸ್ತಾನ ಇವರು ಗಣೇಶ ಪೂಜಾರಿ (43) ಎಂಬವರನ್ನು ದಿನಾಂಕ: 17/04/2011 ರಂದು ಸಾಸ್ತಾನ ಶ್ರೀ ಶಿವಕೃಪಾ ಕಲ್ಯಾಣಮಂಟಪದಲ್ಲಿ ಜಾತಿ ಸಂಪ್ರದಾಯದಂತೆ ಮದುವೆಯಾಗಿರುತ್ತಾರೆ. ಮದುವೆಯ ಸಂಬಂಧ ಮಾಡುವಾಗ ಗಂಡನ ಮನೆಯವರು ರೂ 2,00,000/- ಹಾಗೂ 20 ಪವನ್ ಚಿನ್ನಾಭರಣ ವರಧಕ್ಷಿಣೆಯಾಗಿ ಭೇಡಿಕೆಯನ್ನು ಇಟ್ಟಿದ್ದು , ಸುಜಾತ ಪೂಜಾರ್ತಿ ಇವರ ತಾಯಿ ವರದಕ್ಷಿಣೆಯನ್ನು ನೀಡಲು ನಿರಾಕರಿಸಿದಾಗ ಮದುವೆ ಪ್ರಸ್ತಾಪವನ್ನು ಮುರಿಯುವುದಾಗಿ ಬೆದರಿಕೆ ಹಾಕಿರುತ್ತಾರೆ. ಸುಜಾತ ಪೂಜಾರ್ತಿ ಇವರ ತಾಯಿ ಬೇರೆ ವಿಧಿಯಿಲ್ಲದೇ 1,00,000/- ರೂ ಹಾಗೂ 10 ಪವನ್ ಚಿನ್ನಾಭರಣವನ್ನು ನೀಡಲು ಒಪ್ಪಿಕೊಂಡಿದ್ದು ನಿಶ್ಚಿತಾರ್ಥದ ದಿನವಾದ ದಿನಾಂಕ: 08/02/2011 ರಂದು ರೂ 1,00,000/- ವನ್ನು ಗಂಡ ಗಣೇಶ ಪೂಜಾರಿ ಕೈಯಲ್ಲಿ ನಗದಾಗಿ ನೀಡಿದ್ದು 8 ಪವನ್ ಚಿನ್ನಾಭರಣವನ್ನು ಸುಜಾತ ಪೂಜಾರ್ತಿಗೆ ಹಾಗೂ 2 ಪವನ್ ಚಿನ್ನಾಭರಣವನ್ನು ಗಣೇಶ ಪೂಜಾರಿಗೆ ಗಂಡಿನ ಮನೆಯವರ ಆಪೇಕ್ಷೆಯಂತೆ ನೀಡಿದ್ದಾರೆ ಎನ್ನಲಾಗಿದೆ. ಮದುವೆಯಾದ ನಂತರ ಸುಜಾತ ಪೂಜಾರ್ತಿ ಯವರನ್ನು ಗಂಡನ ಮನೆಯವರು ಬ್ರಹ್ಮಾವರ ತಾಲೂಕಿನ ಬೆಳ್ಮಾರು ಮನೆಗೆ ಸಾಂಸಾರಿಕ ಜೀವನದ ಬಗ್ಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಗಿರಿಜ ಪೂಜಾರ್ತಿ (64)ಗಂಡ: ಕುಷ್ಠ ಪೂಜಾರಿ ,ವಾಸು ಪೂಜಾರಿ(47)ತಂದೆ: ಕುಷ್ಠ ಪೂಜಾರಿ , ಲೀಲಾ ಪೂಜಾರ್ತಿ(40) ಗಂಡ: ವಾಸು ಪೂಜಾರಿ ಇವರು ಎಲ್ಲರೂ ಬೆಳ್ಮಾರು, ಆರೂರು ಅಂಚೆ, ಬ್ರಹ್ಮಾವರ ಇಲ್ಲಿಯೇ ವಾಸವಾಗಿದ್ದು ಇವರೆಲ್ಲರೂ ಸುಜಾತ ಪೂಜಾರ್ತಿ ತಂದ ವರದಕ್ಷಿಣೆ ಕಡಿಮೆಯಾಯಿತೆಂದು ಸುಜಾತ ಪೂಜಾರ್ತಿಯನ್ನು ಹೀಯಾಳಿಸಿ ಹಿಂಸಿಸುತ್ತಿದ್ದರು. ಹಾಗೂ ಮದುವೆಯಾದ ಒಂದು ವಾರದಲ್ಲಿ ಸುಜಾತ ಪೂಜಾರ್ತಿ ಯನ್ನು ಮನೆಯಿಂದ ಹೊರಗೆ ಹಾಕಿದ್ದು, ಸುಜಾತ ಪೂಜಾರ್ತಿ ತನ್ನ ತಾಯಿ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು ಎಂದಿದ್ದಾರೆ. ಸುಜಾತ ಪೂಜಾರ್ತಿ ಗೆ ಹಾಗೂ ಗಣೇಶ ಪೂಜಾರಿ ಗೆ ವಿಸ್ಮಿತಾ (10) ಎಂಬ ಹೆಣ್ಣು ಮಗು ಇದ್ದು, ಗಣೇಶ ಪೂಜಾರಿಯು ಆಗಾಗ ಸುಜಾತ ಪೂಜಾರ್ತಿಯವರ ತಾಯಿ ಮನೆಗೆ ಬಂದು ಸುಜಾತ ಪೂಜಾರ್ತಿ ಗೆ ವೈವಾಹಿಕ ಹಿಂಸೆ ನೀಡುತ್ತಿದ್ದು ಸುಜಾತ ಪೂಜಾರ್ತಿ ಗೆ ಹಾಗೂ ಮಗುವಿನ ಖರ್ಚಿಗೆ ಯಾವುದೇ ಹಣವನ್ನು ನೀಡದೇ ನಿನ್ನ ಜೊತೆ ಸಂಸಾರ ಮಾಡಬೇಕೆಂದರೆ ನಿನ್ನ ತಾಯಿಯನ್ನು ಕೊಂದು ಆಸ್ತಿಯನ್ನು ನನ್ನ ಹೆಸರಿಗೆ ಮಾಡಬೇಕು ಎಂದು ಹೇಳಿ ಹಿಂಸೆಯನ್ನು ನೀಡಿರುತ್ತಾರೆ ಎಂದು ನೀಡಿರುವ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.