ಹಾಸನ: ತಮ್ಮ ಪತ್ನಿ ಭವಾನಿ ರೇವಣ್ಣ ಶಾಸಕಿಯಾಗೇ ಆಗುತ್ತಾರೆ. ಭವಾನಿ ರೇವಣ್ಣ ಒಂದು ದಿನ ಶಾಸಕಿಯಾಗಬಹುದು, ಅವರು ಶಾಸಕಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ, ಐದು ವರ್ಷ ಆಗ್ಬೋದು.10 ವರ್ಷ ಆಗಬಹುದು, ಹೊಳೆನರಸೀಪುರದಲ್ಲಿ ಭವಾನಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುವೆ. ಹಾಸನಕ್ಕೆ ಭವಾನಿ ಬರಲಿ ಎಂದು ಪ್ರೀತಂಗೌಡ ಸವಾಲ್ ಹಾಕಿದ್ದಾರೆ, ಅವರನ್ನು ಕೇಳಿ ನಾವು ಟಿಕೆಟ್ ಕೊಡ್ತೀವಾ, ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಟಿಕೆಟ್ ಕೊಡಬೇಕು ಎಂದರು.ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಭವಾನಿ ಯವರು ಉತ್ತಮ ಕೆಲಸ ಮಾಡಿದ್ದಾರೆ. ಭವಾನಿ ಮೇಡಂ ಗೆ ಅವಕಾಶ ಸಿಕ್ಕರೆ ಅವರು ಶಾಸಕಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.