ದಿನಾಂಕ:10-12-2025(ಹಾಯ್ ಉಡುಪಿ ನ್ಯೂಸ್)
ಆಸ್ಟ್ರೇಲಿಯಾ ಸರ್ಕಾರ ತನ್ನ ದೇಶದಲ್ಲಿ 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸಿರುವ ಕಾನೂನು ಡಿ.10ರಿಂದ ಜಾರಿಗೆ ಬರಲಿದೆ. ಈ ಮೂಲಕ ಹದಿಹರೆಯದವರಿಗೆ ಜಾಲತಾಣ ಬಳಕೆ ನಿಷೇಧಿಸಿದ ಮೊದಲ ದೇಶ ಎನಿಸಿಕೊಂಡಿದೆ.
ಸಿಡ್ನಿ: ಆಸ್ಟ್ರೇಲಿಯಾ ಸರ್ಕಾರ ತನ್ನ ದೇಶದಲ್ಲಿ 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸಿರುವ ಕಾನೂನು ಡಿ.10ರಿಂದ ಜಾರಿಗೆ ಬರಲಿದೆ. ಈ ಮೂಲಕ ಹದಿಹರೆಯದವರಿಗೆ ಜಾಲತಾಣ ಬಳಕೆ ನಿಷೇಧಿಸಿದ ಮೊದಲ ದೇಶ ಎನಿಸಿಕೊಂಡಿದೆ.ಹೊಸ ಕಾನೂನಿನ ಪ್ರಕಾರ ಇನ್ಸ್ಟಾಗ್ರಾಮ್, ಫೇಸ್‌ಬುಕ್, ಟಿಕ್‌ಟಾಕ್ ಹಾಗೂ ಯೂಟ್ಯೂಬ್‌ಗಳ ಬಳಕೆಗೆ ನಿಯಂತ್ರಣ ಬೀಳಲಿದೆ. ಈಗಾಗಲೇ ಮೆಟಾ 16 ವಯೋಮಾನಕ್ಕಿಂತ ಕಡಿಮೆ ಇರುವವರ ಖಾತೆಗಳನ್ನು ಸ್ಥಗಿತಗೊಳಿಸಿದೆ. ವಾಟ್ಸಾಪ್, ಮೆಸೆಂಜರ್ ಸೇರಿದಂತೆ ಕೆಲ ಸಂದೇಶ ವಿನಿಮಯ ಆ್ಯಪ್‌ಗಳಿಗೆ ವಿನಾಯಿತಿ ದೊರೆತಿದೆ. ಒಂದು ವೇಳೆ ಆ್ಯಪ್‌ಗಳು ನಿಯಮವನ್ನು ಉಲ್ಲಂಘಿಸಿದರೆ ಸುಮಾರು 288 ಕೋಟಿ ದಂಡ ಪಾವತಿಸಬೇಕೆಂದು ಸರ್ಕಾರ ಎಚ್ಚರಿಸಿದೆ.
