IMG_20251207_225543.jpg
Spread the love

ದಿನಾಂಕ:07-12-2025(ಹಾಯ್ ಉಡುಪಿ ನ್ಯೂಸ್)

ಕಲಬುರಗಿ: ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೂ ರೈತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಮತ್ತು ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಬಿಜೆಪಿ ಭಾನುವಾರ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿತು.

ಎನ್ ಡಿಆರ್ ಎಫ್ ನ ನಿಯಮಾವಳಿ ಪ್ರಕಾರ ಪ್ರತಿ ಹೆಕ್ಟೇರ್ ಗೆ 8, 500 ನಂತೆ ಎರಡು ಹೆಕ್ಟೇರ್ ಗೆ ಕೇಂದ್ರ ಸರ್ಕಾರ 1,700 ರೂ ನೀಡುತ್ತದೆ. ರಾಜ್ಯ ಸರ್ಕಾರ 1700 ರೂ ನೀಡಿದರೆ ಐದು ಎಕರೆ ಭೂಮಿ ಇರುವ ರೈತನಿಗೆ 3400 ಪರಿಹಾರ ದೊರಕಬೇಕು. ಆದರೆ ರಾಜ್ಯ ಸರ್ಕಾರ ಬಿಡಿಗಾಸು ನೀಡಿ ಕೈ ತೊಳೆದುಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಹಾಲಿನ ಪ್ರೋತ್ಸಾಹ ಧನವನ್ನು 5 ರೂ.ನಿಂದ 7 ರೂ.ಗೆ ಹೆಚ್ಚಿಸಬೇಕು. 620 ಕೋಟಿ ರೂ. ಪ್ರೋತ್ಸಾಹ ಧನದ ಬಾಕಿ ಹಣ ಬಿಡುಗಡೆ ಮಾಡಬೇಕು. ಕಬ್ಬಿಗೆ ಪ್ರತಿ ಟನ್ ಗೆ 3300 ರೂ. ಬೆಂಬಲ ಬೆಲೆಯನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

error: No Copying!