ದಿನಾಂಕ:08-12-2025(ಹಾಯ್ ಉಡುಪಿ ನ್ಯೂಸ್)
ಡಾಲರ್ ನ ಬೆಲೆ 90ಕ್ಕೂ ಅಧಿಕ ದಾಟಿದೆ, ಆದರೆ ಮೋದಿಯವರು ಇನ್ನೂ ಕೂಡ ತಮ್ಮ ಸ್ಥಾನಕ್ಕೆ ಏಕೆ ರಾಜೀನಾಮೆ ಕೊಡಲಿಲ್ಲ ಎಂದು ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ ಮಾಡಿದ್ದಾರೆ .
ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತ ಇರುವಾಗ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರು ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಹೀನಾಯವಾಗಿ ಅವರ ಬಗ್ಗೆ ಮಾತನಾಡಿ ತಾನು ಡಾಲರ್ ಬೆಲೆಯನ್ನು ಮೂವತ್ತಕ್ಕೆ ಇಳಿಸುತ್ತೇನೆ ಎಂದು ಬುರುಡೆ ಬಿಟ್ಟು ಅಧಿಕಾರ ಪಡೆದುಕೊಂಡು ಇದೀಗ ಅಧಿಕಾರದ ಕುರ್ಚಿಯಲ್ಲಿ ಅಂಟಿಕೊಂಡು ಇರುವ ಮಾನ್ಯ ನರೇಂದ್ರ ಮೋದಿಯವರ ಸಹಿತ ಎಲ್ಲಾ ಬಿಜೆಪಿ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತುಕೊಳ್ಳಿ . ನಮ್ಮ ದೇಶದ ಜನರನ್ನು ಮೋಸಗೊಳಿಸುವ ಕಾರ್ಯಕ್ರಮ ದಯವಿಟ್ಟು ಮುಗಿಸಿ. ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭಾ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
