ಪಡುಬಿದ್ರಿ: ದಿನಾಂಕ:07-12-2025(ಹಾಯ್ ಉಡುಪಿ ನ್ಯೂಸ್) ನಮೂನೆ 11 ಬಿ ಧ್ರಢಪತ್ರಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ನಕಲಿ ಸಹಿಯನ್ನು ಹಾಕಿ ಯಾರೋ ಮೋಸ ಮಾಡಿದ್ದಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಪು ತಾಲೂಕು, ತೆಂಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಜನಿ (47) ಅವರಿಗೆ ದಿನಾಂಕ 30/10/2025 ರಂದು ಸಾರ್ವಜನಿಕರು ತೆಂಕ ಗ್ರಾಮದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ಸಹಿ ಇರುವ ದಾಖಲೆ ದುರುಪಯೋಗ ಆಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ .
ಸಾರ್ವಜನಿಕ ಮಾಹಿತಿ ಮೇರೆಗೆ ಸಂಶಯಗೊಂಡು ತೆಂಕ ಗ್ರಾಮ ಪಂಚಾಯತ್ ಕಛೇರಿಯಿಂದ ಮೂಲ್ಕಿ ಉಪ-ನೊಂದಣಾಧಿಕಾರಿಯವರ ಕಛೇರಿಗೆ ಕಳುಹಿಸಿದ ದಾಖಲೆಗಳ ಬಗ್ಗೆ ಮೂಲ್ಕಿ ಉಪ-ನೊಂದಣಾಧಿಕಾರಿಯವರ ಕಛೇರಿಯಲ್ಲಿ ಶ್ರೀಮತಿ ರಜನಿರವರು ಪರಿಶೀಲಿಸಿದಾಗ ತೆಂ.ಗ್ರಾ.ಪಂ 003/2025-26 ನಂಬ್ರದ ದಿನಾಂಕ ನಮೂದು ಇಲ್ಲದ ತೆಂಕ ಗ್ರಾಮ ಪಂಚಾಯತ್‌ನ ಲೆಟರ್ ಹೆಡ್‌ನ ದೃಡಪತ್ರದ ಜೆರಾಕ್ಸ್ ಪ್ರತಿ ಇದ್ದು ಅದರಲ್ಲಿ “ ಉಡುಪಿ ಜಿಲ್ಲೆ ಕಾಪು ತಾಲೂಕು ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ 7 ನೇ ವಾರ್ಡಿನ ಸರ್ವೇ ನಂಬ್ರ 56/2 ರಲ್ಲಿ ಗಿರಿಯಪ್ಪ ಕೋಟ್ಯಾನ್ ಎಂಬವರ ಹೆಸರಿನಲ್ಲಿ ಕಟ್ಟಡ ನಂಬ್ರ 7-5 (152600304100110964) ರಲ್ಲಿರುವ ವಾಸ್ತವ್ಯದ ಕಟ್ಟಡವು ಸುಮಾರು 800 ಚದರ ಅಡಿಯ ಹಂಚಿನ ಕಟ್ಟಡವಾಗಿದ್ದು,ಸದ್ರಿ ಕಟ್ಟಡದ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿರುತ್ತದೆ ಎಂದು ಈ ಮೂಲಕ ದೃಡಪಡಿಸಲಾಗಿದೆ “ ಎಂಬುದಾಗಿ ನಮೂದು ಇದ್ದು, ಈ ದೃಡಪತ್ರದಲ್ಲಿ ತೆಂಕ ಗ್ರಾಮ ಪಂಚಾಯತ್‌ನ ಲೆಟರ್ ಹೆಡ್‌ನಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ಸೀಲು ಹಾಗೂ ಶ್ರೀಮತಿ ರಜನಿರವರ ನಕಲಿ ಸಹಿ ಇರುವುದು ಕಂಡುಬಂದಿದ್ದು, ನಮೂನೆ 11 ಬಿ ಯು ಈ ವರ್ಷ ಜೂನ್ ತಿಂಗಳಿನಿಂದ ಬಂದ್ ಆಗಿ ಈ ವರ್ಷ ಡಿಸೆಂಬರ್ 1 ನೇ ತಾರೀಕಿನಂದು ಓಪನ್ ಆಗಿದ್ದು, ಆ ಮಧ್ಯದಲ್ಲಿ ಯಾರೋ ಯಾವುದೋ ದುರುದ್ದೇಶದಿಂದ ತೆಂಕ ಗ್ರಾಮ ಪಂಚಾಯತ್ ಕಛೇರಿಯ ಲೆಟರ್ ಹೆಡ್, ಸೀಲನ್ನು ದುರ್ಬಳಕೆ ಮಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರ ನಕಲಿ ಸಹಿಯನ್ನು ಮಾಡಿ ಉಪ ನೊಂದಣಿ ಕಛೇರಿ ಮೂಲ್ಕಿ ಇಲ್ಲಿಗೆ ನಮೂನೆ 11 ಬಿ ರ ಬದಲಿಗೆ ದೃಡಪತ್ರ ನೀಡಿ ಶ್ರೀಮತಿ ರಜನಿರವರಿಗೆ ಮೋಸ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 335A(1),336(2),336(3),318(4) ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದೆ.
