ಬ್ರಹ್ಮಾವರ: ಏಪ್ರಿಲ್ ೨೫ (ಹಾಯ್ ಉಡುಪಿ ನ್ಯೂಸ್) ಸಾಲ ಪಡೆಯುವಾಗ ಕಾಡಿ ಬೇಡಿ ಸಾಲ ಪಡೆದು ಸಾಲ ವಾಪಾಸು ಕೇಳಿದಾಗ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
52 ಹೇರೂರು, ಮಾರಿಕಟ್ಟೆ ಕೊಳಂಬೆ ನಿವಾಸಿ ಸಾಗರ್ ಆಚಾರ್ಯ (೨೪) ಹಾಗೂ ಶಿವಮೊಗ್ಗ ಜಿಲ್ಲೆ , ತೀರ್ಥಹಳ್ಳಿ ತಾಲೂಕು ,ಕಡ್ತೂರು, ಕಮ್ಮರಡಿಯ ನಿವಾಸಿ ಸತ್ಯ ನಾರಾಯಣ ಆಚಾರ್ಯ (೨೮) ಇವರು ಸಂಭಂಧಿಕರಾಗಿದ್ದು ಸತ್ಯ ನಾರಾಯಣ ಆಚಾರ್ಯ ನ ವ್ಯವಹಾರದ ಉದ್ದೇಶಕ್ಕಾಗಿ 2021 ಜೂನ್ ತಿಂಗಳಿನಿಂದ ಸಾಗರ್ ಆಚಾರ್ಯ ನ ಬಳಿ 10,00,000/- ರೂಪಾಯಿ ಸಾಲವನ್ನು ಬೇಡಿಕೆ ಇಟ್ಟಿದ್ದು ಹಣ ಇಲ್ಲ ಎಂದರೂ ಪದೇ ಪದೇ ಸಾಲಕ್ಕಾಗಿ ಮನವಿ ಮಾಡಿದ ಮೇರೆಗೆ ಸಾಗರ್ ಆಚಾರ್ಯ ತನ್ನ ಕೆನರಾ ಬ್ಯಾಂಕ್ ಖಾತೆ ಬ್ರಹ್ಮಾವರದಿಂದ 74,000/- ರೂಪಾಯಿ ಹಣ ಹಾಗೂ ತನ್ನ ದೊಡ್ಡಪ್ಪನ ಮಗನಾದ ರಮೇಶ ಆಚಾರ್ಯ ರಿಂದ ಬ್ಯಾಂಕ್ ಆಫ್ ಬರೋಡ ಸೂಡಾ ದಿಂದ ಒಟ್ಟು 5,65,000/- ಒಟ್ಟು 6,39,000/- ರೂಪಾಯಿ ಹಣವನ್ನು ಸತ್ಯ ನಾರಾಯಣ ಆಚಾರ್ಯ ಕೊಟ್ಟ ಮಾತಿನಂತೆ ಸತ್ಯ ನಾರಾಯಣ ಆಚಾರ್ಯ ನ ಕೆನರಾ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ ಕಮ್ಮರಡಿಯ ಖಾತೆಗೆ ಹಣವನ್ನು ಜಮಾ ಮಾಡಿದ್ದು ಆರೋಪಿಯು ಹಣವನ್ನು ಇದುವರೆಗೂ ವಾಪಸ್ಸು ನೀಡದೇ ವಂಚಿಸುತ್ತಾ ಬಂದಿದ್ದು, ಈ ಬಗ್ಗೆ ತಾನು ಪೋಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ಸಾಗರ್ ಆಚಾರ್ಯರಿಗೆ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿ, ಹಣವನ್ನು ವಾಪಸ್ಸು ಕೊಡುವುದಿಲ್ಲ ಏನೂ ಬೇಕಾದರೂ ಮಾಡಿಕೋ ಎಂದು ಸತ್ಯ ನಾರಾಯಣ ಆಚಾರ್ಯ ಬೆದರಿಕೆ ಹಾಕಿರುತ್ತಾನೆ ಎಂದು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.