ಕೋಟ : ಏಪ್ರಿಲ್ ೨೫(ಹಾಯ್ ಉಡುಪಿ ನ್ಯೂಸ್) ಸ್ವಂತ ಅಕ್ಕನ ಮಗನೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ದೂರು ದಾಖಲಾಗಿದೆ.
ಕುಂದಾಪುರ ತಾಲೂಕು,ಗುಳ್ಳಾಡಿ, ಬೇಳೂರು ಗ್ರಾಮದ ನಿವಾಸಿ ಉದಯ (೪೦) ಇವರು ದಿನಾಂಕ 22/04/2022 ರಂದು ಮೈಸೂರಿನಿಂದ ತನ್ನ ಮನೆಯಾದ ಗುಳ್ಳಾಡಿಗೆ ಬಂದಿದ್ದು, ಸಂಜೆ 7:00 ಗಂಟೆಯ ಸಮಯಕ್ಕೆ ಉದಯರ ಅಕ್ಕನ ಮಗ ಸುಜನ್ ವಿನಾಕಾರಣ ಜಗಳಕ್ಕೆ ಬಂದಿದ್ದು ಆಗ ತಾಯಿ ಸುಮ್ಮನಿರಲು ಹೇಳಿದಕ್ಕೆ ಉದಯರವರು ಮನೆಗೆ ಹೋಗಿದ್ದು, ದಿನಾಂಕ 23/04/2022 ಬೆಳಿಗ್ಗೆ ಉದಯರವರು ಮನೆಯ ಹೊರಗೆ ನಿಂತುಕೊಂಡಿದ್ದಾಗ ಬೆಳಿಗ್ಗೆ 7:00 ಗಂಟೆಗೆ ಸುಜನ್ ಉದಯರನ್ನು ಉದ್ದೇಶಿಸಿ, ಅವಾಚ್ಯವಾಗಿ ಬೈದು ಕೈಯಿಂದ ಹೊಡೆಯಲು ಬಂದಾಗ ಉದಯರು ಅಲ್ಲಿಂದ ಹೋಗಲು ನೋಡಿದಾಗ ಅವರನ್ನು ತಡೆದು ನಿಲ್ಲಸಿ, ಮನೆಯ ಹೊರಗಿದ್ದ ಕತ್ತಿಯನ್ನು ತಂದು ಹೊಡೆಯಲು ಬಂದಾಗ ಉದಯರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಬಲ ಕೈಗೆ ತಾಗಿ ರಕ್ತಗಾಯವಾಗಿದ್ದು, ನಂತರ ಕೆಳಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದಿದ್ದು, ಆಗ ಉದಯರ ಅಕ್ಕ ಮತ್ತು ತಾಯಿ ತಪ್ಪಿಸಿದ್ದು, ಸುಜನ್ ಹೊಡೆದ ಪರಿಣಾಮ ಉದಯರಿಗೆ ಹಣೆಗೆ ತಲೆಗೆ ಎರಡೂ ಕೈಗೆ ಬೆನ್ನಿಗೆ ತರಚಿದ ಗಾಯವಾಗಿದ್ದು, ಮತ್ತು ಬಲ ಕೈಗೆ ರಕ್ತ ಗಾಯವಾಗಿರುತ್ತದೆ ಈ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.