ಮಲ್ಪೆ: ಏಪ್ರಿಲ್ ೨೫ (ಹಾಯ್ ಉಡುಪಿ ನ್ಯೂಸ್) ಬೀಚ್ ನಲ್ಲಿ ಈಜಲು ಹೋದ ಪೊಲೀಸ್ ಸಿಬ್ಬಂದಿಗಳ ಸ್ವತ್ತುಗಳನ್ನೇ ಕಳವು ಗೈದ ಘಟನೆ ನಡೆದಿದೆ.
ದಿನಾಂಕ 24/04/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, 1 ನೇ ಬೆಟಾಲಿಯನ್ ಕೆ.ಎಸ್.ಐ.ಎಸ್.ಎಫ್ , ಯಲಹಂಕ ಬೆಂಗಳೂರು ಮತ್ತು ಚಂದ್ರಶೇಖರ, ಶರಣಬಸಪ್ಪ, ಚಿರಂಜೀವಿ,ತ್ರಿಣೇಶ ಒಟ್ಟು 5 ಜನ ಸೇರಿ ಸಮಯ 12:00 ಗಂಟೆಗೆ ಮಲ್ಪೆ ಬೀಚ್ ಗೆ ಬಂದು ತಮ್ಮ ಬ್ಯಾಗ್, ಮೊಬೈಲ್ ಪೋನ್ , 5 ವಾಲೇಟ್ಸ್ , WRIST WATCH ಗಳನ್ನು ಸಮುದ್ರ ಕಿನಾರೆಯಲ್ಲಿ ಇಟ್ಟು ಈಜಾಡಲು ಹೋಗಿ ಪುನ ಬಂದು ನೋಡಿದಾಗ ಇಟ್ಟ ವಸ್ತುಗಳು ಕಾಣಿಸದೆ ಇದ್ದು , ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. 3 ಕಾಲೇಜು ಬ್ಯಾಗ್, 4 ಸೆಲ್ ಪೋನ್ , 5 ವಾಲೆಟ್ಸ್ , ಎಟಿಎಂ ಕಾರ್ಡ್, ಆದಾರಕಾರ್ಡ್, ಪಾನ್ ಕಾರ್ಡ್, ಮತದಾರ ಗುರುತಿನ ಚೀಟಿ , ಡಿಎಲ್, ಮಂಜುನಾಥರ ಮತ್ತು ಚಂದ್ರಶೇಖರರವರ ಪೊಲೀಸ್ ಐಡಿ ಕಾರ್ಡ್ ಕಳ್ಳತನವಾಗಿದ್ದು . ಕಳ್ಳತನವಾದ ಸ್ವತ್ತಿನ ಒಟ್ಟು ಮೌಲ್ಯ 70,000/- ರೂಪಾಯಿ ಆಗಿರುತ್ತದೆ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.