IMG_20251118_220934.jpg
Spread the love

ಕಾಪು: ದಿನಾಂಕ:18-11-2025(ಹಾಯ್ ಉಡುಪಿ ನ್ಯೂಸ್) ದಾಂಪತ್ಯ ಜೀವನದಲ್ಲಿ ಸಮಸ್ಯೆಯ ಕಾರಣದಿಂದ ಕೌನ್ಸಿಲಿಂಗ್ ಗೆ ಬಂದ ನೊಂದ ಮಹಿಳೆಯೋರ್ವರಿಗೆ ಕೌನ್ಸಿಲಿಂಗ್ ನಡೆಸುವಾಗ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ದಾಂಪತ್ಯ ಜೀವನದಲ್ಲಿ ಸಮಸ್ಯೆಯ ಕಾರಣದಿಂದ ಸಂತ್ರ ಸ್ತರಾಗಿದ್ದ ಮಹಿಳೆಯೋರ್ವರು ಕಾಪು ತಾಲೂಕು ಮೂಳೂರು ಗ್ರಾಮದ ಕಂಕಣಗುತ್ತು ಕಾಂಪೌಂಡ್ ನಲ್ಲಿರುವ ಸುನಂದಾ ವೆಲ್ ನೆಸ್ ಸೆಂಟರ್ ಗೆ ಹೋಗಿದ್ದಾಗ ಅಲ್ಲಿನ ಅಧಿಕಾರಿ ಆರೋಪಿ ನಿರಂಜನ ಶೇಖರ ಶೆಟ್ಟಿ ಎಂಬವನು ಸಂತ್ರಸ್ಥ ಮಹಿಳೆಯನ್ನು ಕೌನ್ಸಿಲಿಂಗ್ ನಡೆಸುವ ನೆಪದಲ್ಲಿ ಮಹಿಳೆಯನ್ನು ದೈಹಿಕವಾಗಿ ಸ್ಪರ್ಶ ಮಾಡಿ ಲೈಂಗಿಕ ಕಿರುಕುಳ ನೀಡಿದ್ದನು ಎಂದು ನೊಂದ ಮಹಿಳೆ ಕಾಪು ಪೊಲೀಸರಿಗೆ ದೂರು ನೀಡಿದ್ದರು.

ಮಹಿಳೆಯ ದೂರಿನ ಮೇರೆಗೆ ತನಿಖೆ ಪ್ರಾರಂಭಿಸಿದ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ.ಹರ್ಷ ಪ್ರಿಯಂವದಾ ಐಪಿಎಸ್ ಹಾಗೂ ಕಾಪು ವ್ರತ್ತ ನಿರೀಕ್ಷಕರಾದ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ತನಿಖೆ ಪ್ರಾರಂಭಿಸಿದ ಕಾಪು ಪೊಲೀಸ್‌ ಠಾಣೆಯ ಪಿಎಸ್ಐ ಶುಭಕರ ಹಾಗೂ ಸಿಬ್ಬಂದಿಗಳು ಆರೋಪಿ ನಿರಂಜನ ಶೇಖರ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ .

error: No Copying!