ಮಲ್ಪೆ: ದಿನಾಂಕ :18-11-2025(ಹಾಯ್ ಉಡುಪಿ ನ್ಯೂಸ್) ಕೊಡವೂರು ಗ್ರಾಮದ ವಿಠೋಬಾ ಭಜನಾ ಮಂದಿರದ ಸದಸ್ಯರಿಗೆ ಆರೋಪಿಯೋರ್ವನು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಲ್ಪೆ ಹನುಮಾನ್ ನಗರ ನಿವಾಸಿ ಸತೀಶ್ ಬಂಗೇರ ಎಂಬವರು ವಿಠೋಬಾ ಭಜನಾ ಮಂದಿರದ ಸದಸ್ಯರೊಂದಿಗೆ ದಿನಾಂಕ 17/11/2025 ರಂದು ಸಾಯಂಕಾಲ ಉಡುಪಿ ತಾಲೂಕು ಕೊಡವೂರು ಗ್ರಾಮದ ವಿಠೋಬಾ ಭಜನಾ ಮಂದಿರದ ಬಳಿ ಇರುವಾಗ, ಆರೋಪಿಯೋರ್ವನು ಬಂದು ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ, ಆ ಸಂದರ್ಭದಲ್ಲಿ ಅಲ್ಲಿದ್ದ ಶೇಖರ್ ಪುತ್ರನ್, ಧನಂಜಯ್ ಕಾಂಚನ್, ವಿಜಯ ಸುವರ್ಣ, ದಯಾನಂದ ಕಾಂಚನ್ ಇವರಿಗೆಲ್ಲಾ ಮೊಬೈಲ್ ನಲ್ಲಿ ಆಡಿಯೋ ರೆಕಾರ್ಡ್ ಮಾಡಿ, “ನಿಮ್ಮ ಮನೆಗೆ ಹೊಕ್ಕಿ ಹೊಡೆಯುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:352, 351(2) BNS ರಂತೆ ಪ್ರಕರಣ ದಾಖಲಾಗಿದೆ.
