stock-photo-love-triangle.jpeg
Spread the love

ಬೈಂದೂರು: ದಿನಾಂಕ:18-11-2025(ಹಾಯ್ ಉಡುಪಿ ನ್ಯೂಸ್) ಶಿರೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಜನರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ ಬಿ ಎನ್ ಅವರು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್‌ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ ಬಿ ಎನ್‌ ರವರು ದಿನಾಂಕ :16-11-2025 ರಂದು ಠಾಣೆಯಲ್ಲಿದ್ದಾಗ ರಾತ್ರಿ ಸಾರ್ವಜನಿಕರು ಪೋನ್ ಮಾಡಿ ಮೊಯಿದ್ದೀನ್ಪುರ ಶಿರೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ .

ಮಾಹಿತಿ ಬಂದ ಕೂಡಲೇ ದಾಳಿ ನಡೆಸಲು ಸಿಬ್ಬಂದಿಗಳೊಂದಿಗೆ  ರಾತ್ರಿ  ಸ್ಥಳಕ್ಕೆ ಹೋದಾಗ ಮೊಯಿದ್ದೀನ್ಪುರ ಶಿರೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ನೆಲದ ಮೇಲೆ ಕಪ್ಪು ಬಣ್ಣದ ಟಾರ್ಪಾಲ್ಯನ್ನು ಹಾಸಿ ಕ್ಯಾಂಡಲ್ ಬೆಳಕಿನಲ್ಲಿ ಅದರಲ್ಲಿ ಓರ್ವನು ತನ್ನ ಕೈಯಲ್ಲಿರುವ ಇಸ್ಪೀಟ್ ಎಲೆಗಳನ್ನು ಒಂದೊಂದಾಗಿ ಟಾರ್ಪಾಲ್ ಮೇಲೆ ಎರಡು ಭಾಗಗಳಾಗಿ ಹಾಕುತ್ತಿರುವಾಗ ಉಳಿದವರು ಅಂದರ್ 100 ರೂಪಾಯಿ ಬಾಹರ್ 200 ರೂಪಾಯಿ ಎಂದು ಹೇಳುತ್ತಾ ಹಣವನ್ನು ಪಣವಾಗಿರಿಸಿಕೊಂಡು ಜೂಜಾಟ ಆಡುತ್ತಿದ್ದು ತಿಮ್ಮೇಶ್ ಬಿ ಎನ್ ರವರು ಸಿಬ್ಬಂದಿಯವರ ಸಹಾಯದಿಂದ ಸ್ಥಳಕ್ಕೆ ಧಾಳಿ ಮಾಡಿ ಇಸ್ಪೀಟ್ ಜುಗಾರಿ ಆಟವನ್ನು ಆಡುತ್ತಿದ್ದ 1. ಶೇಖರ (36) ವಾಸ ಜೋಗೂರು , ಪಡುವರಿ ಗ್ರಾಮ 2. ಹರೀಶ್ ನಾಯ್ಕ್ (42) ವಾಸ ಬೈದನ್ ಮನೆ, ಮಾರುತಿ ನಗರ, ಭಟ್ಕಳ , 3.ದೇವಂದ್ರ ಜಟ್ಟಪ್ಪ ನಾಯ್ಕ್ ( 38)  ವಾಸ: ಮಂಡೂಳಿ ಭಟ್ಕಳ ತಾಲೂಕು. 4.ಆಶೋಕ ವೆಂಕಟೇಶ ನಾಯ್ಕ್ ಪ್ರಾಯ 42 ವಾಸ: ತಲಾನ್ ಮುಟ್ಟಳ್ಳಿ ಪೋಸ್ಟ್ , ಭಟ್ಕಳ ತಾಲೂಕು 5.ನಾಗಪ್ಪ ಗೊವೀಂದ ನಾಯ್ಕ್ ಪ್ರಾಯ 45  ವಾಸ: ಕಲ್ಲಬಂಡಿ ಮನೆ ಬೆಳ್ಕ ಪೋಸ್ಟ್ ಭಟ್ಕಳ ತಾಲೂಕು 6] ದಿವಾಕರ ಪ್ರಾಯ 32  ವಾಸ 4/27, ಮೊಯಿದ್ದೀನ್‌ ಪುರ ಶಿರೂರು ಗ್ರಾಮ ಎಂಬವರನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ.

ಬಂಧಿತರುಗಳನ್ನು ವಿಚಾರಿಸಿದಾಗ ಸ್ವಂತ ಲಾಭಕ್ಕಾಗಿ ಇಸ್ಪೀಟ್ ಜುಗಾರಿ ಆಟವಾಡುತ್ತಿರುವುದಾಗಿ ತಿಳಿಸಿದ್ದು ಆಪಾದಿತರು ಇಸ್ಪೀಟ್ ಜುಗಾರಿ ಆಡುತ್ತಿದ್ದ ಸ್ಥಳದಲ್ಲಿ ಎದುರುಗಡೆ ಹಣವನ್ನು ಇಟ್ಟುಕೊಂಡು ಟಾರ್ಪಾಲ್ ಮೇಲೆ ಜೂಜಾಟಕ್ಕೆ ಹಾಕುತ್ತಿದ್ದ ಹಣವನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ 1) ಇಸ್ಟೀಟ್‌, ಡೈಮಂಡ್‌‌, ಆಟೀನ್, ಕ್ಲವರ್‌‌ ಚಿತ್ರ ಇರುವ ಇಸ್ಟೀಟ್‌‌ ಎಲೆಗಳು-52, 2) ನಗದು ರೂಪಾಯಿ-24010/- ರೂ ಹಾಗೂ ಸ್ಥಳದಲ್ಲಿದ್ದ 1. KA.47X3978 ಅಕ್ಟಿವ್ ಡಿಯೋ, 2. KA20.HF.5957 HERO SUPER SPLENDER 3. KA.20.X.0003SUPER SPLENDER ಮತ್ತು 4. KA.20EN.1250 ಬಜಾಜ್ ಪಲ್ಸರ್ ಮೋಟಾರ ಸೈಕಲ್ ಇನ್ನಿತರ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 200/2025 ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!