ಗಂಗೊಳ್ಳಿ: ಏಪ್ರಿಲ್ ೨೪(ಹಾಯ್ ಉಡುಪಿ ನ್ಯೂಸ್) ತ್ರಾಸಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 23/04/2022 ರಂದು ಶ್ರೀಕಾಂತ್ ಕೆ, ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಇವರಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ತ್ರಾಸಿ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು , ಕೂಡಲೇ ದಾಳಿ ನಡೆಸಿ ಮಟ್ಕಾ ಬಗ್ಗೆ ಹಣ ಸಂಗ್ರಹಿಸುತ್ತಿದ್ದ ಗುಜ್ಜಾಡಿ ಗ್ರಾಮ,ಹೋಲಿ ಕ್ರಾಸ್ ,೫ ಸೆಂಟ್ಸ್ ನಿವಾಸಿ ರವಿ ಪೂಜಾರಿ (೩೨) ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನು ತನ್ನ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿರುವುದಾಗಿ ಹಣವನ್ನು ಸಂಗ್ರಹಿಸಿ ಬಿಡ್ಡರ್ ರಾಮಚಂದ್ರ ಎಂಬಾತನಿಗೆ ನೀಡುತ್ತಿರುವುದಾಗಿ, ತನಗೆ ಕಮಿಷನ್ ನೀಡುತ್ತಿದ್ದು ಬಾಜಿಯಲ್ಲಿ ಗೆದ್ದವರಿಗೆ ಮರುದಿನ ಹಣವನ್ನು ಅವರೇ ಪಾವತಿಸುವುದಾಗಿ ತಿಳಿಸಿದ್ದು , ಆತನ ಕೈಯಲ್ಲಿದ್ದ ಮಟ್ಕಾಚೀಟಿ-1, ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ಹಣ 1195/- ರೂಪಾಯಿ, ಬಾಲ್ ಪೆನ್-1 ನ್ನು ಸ್ವಾಧೀನಪಡಿಸಿಕೊಂಡಿದ್ದು , ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.