ಕಾಪು: ಏಪ್ರಿಲ್ ೨೪ ( ಹಾಯ್ ಉಡುಪಿ ನ್ಯೂಸ್) ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ಯಾರೇಜ್ ಗೆ ಕಳ್ಳರು ನುಗ್ಗಿರುವ ಬಗ್ಗೆ ದೂರು ದಾಖಲಾಗಿದೆ.
ಕನ್ನಂಗಾರು ,ಕಾಪು ನಿವಾಸಿ ಶಮನ್ ವಿ ಕೋಟ್ಯಾನ್ ಇವರು ಮೂಡಬೆಟ್ಟು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಮಂಗಳೂರು ರಸ್ತೆಯ ಪಕ್ಕದಲ್ಲಿ ತನ್ನ ಭಾವ ಪದ್ಮನಾಭ ಪೂಜಾರಿಯವರೊಂದಿಗೆ “ಶ್ರೀ ಬಾಲಾಜಿ ಮೋಟಾರ್ಸ್” ಹೆಸರಿನ ಗ್ಯಾರೇಜ್ ನೆಡೆಸಿಕೊಂಡಿದ್ದು ದಿನಾಂಕ 16/04/2022 ರಂದು ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವಾಗ ಹೆವಿ ಜಾಕ್ ಹುಡುಕಿದ್ದು ಸಿಗದೇ ಇದ್ದ ಕಾರಣ ಹುಡುಕಾಡಿದಾಗ ಗ್ಯಾರೇಜ್ನಲ್ಲಿ ಇರಿಸಿದ್ದ ವಾಹನದ ಬಿಡಿಭಾಗಗಳು ಇಲ್ಲದೇ ಇದ್ದು ಸಿಸಿ ಕ್ಯಾಮರವನ್ನು ಪರಿಶೀಲಿಸಿದಾಗ ದಿನಾಂಕ 12/04/2022 ರಂದು ರಾತ್ರಿ 10:18 ಗಂಟೆಯಿಂದ 11:10 ಗಂಟೆಯ ನಡುವೆ ಇಬ್ಬರು ಅಪರಿಚಿತ ಯುವಕರು ರಸ್ತೆ ಬದಿಯ ಕಂಪೌಂಡ್ ಮೇಲೆ ಅಳವಡಿಸಿದ್ದ ತಗಡು ಶೀಟನ್ನು ಕಳಚಿ ಗ್ಯಾರೇಜ್ ಒಳಗೆ ಪ್ರವೇಶೀಸಿ ಗ್ಯಾರೇಜ್ ನಲ್ಲಿದ್ದ ವಾಹನಗಳ ವಿವಿಧ ಭಾಗಗಳ ಸ್ವತ್ತುಗಳನ್ನು ಹಾಗು ವಾಟರ್ ಪಂಪ್ ಒಂದನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು , ಕಳುವಾದ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 1,47,900/- ಆಗಿರುತ್ತದೆ ಎಂದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.