Spread the love

ಇಸ್ಲಾಮಾಬಾದ್‌/ಲಂಡನ್: ಒಂದು ಅಥವಾ ಎರಡು ದಿನಗಳಲ್ಲಿ ಪಾಕಿಸ್ತಾನ ಪೀಪಲ್ಸ್‌ ಪಕ್ಷದ (ಪಿಪಿಪಿ) ಅಧ್ಯಕ್ಷ ಬಿಲಾವಲ್‌ ಭುಟ್ಟೋ ಜರ್ದಾರಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಕಮರ್ ಜಮಾನ್ ಕೈರಾ ಹೇಳಿದ್ದಾರೆ.  ಜರ್ದಾರಿ ಕುಟುಂಬದ ಭುಟ್ಟೋ (33) ವಿದೇಶಾಂಗ ಸಚಿವರ ಹುದ್ದೆಗೆ ಮುಂಚೂಣಿಯಲ್ಲಿರುವವರು. ಮಂಗಳವಾರ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.  ಪ್ರಧಾನಿಯವರ ಸಲಹೆಗಾರರೂ ಆಗಿರುವ ಕಮರ್‌ ಲಂಡನ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಬಿಲಾವಲ್‌ ಅವರು ವಿದೇಶಾಂಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಖಚಿತಪಡಿಸಿದ್ದಾರೆ .

error: No Copying!