Spread the love

ಉಡುಪಿ: ಏಪ್ರಿಲ್ ೨೩(ಹಾಯ್ ಉಡುಪಿ ನ್ಯೂಸ್) ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರಲಾಗಿದೆ.

ಶ್ರೀಮತಿ ಐ ಮೋಹಿನಿ ಇವರು ಪರಿಶಿಷ್ಟ ಜಾತಿಯವರಾಗಿದ್ದು, ಮಣಿಪಾಲದ ಮಂಚಿಕುಮೇರಿ ವಾಸಿಯಾಗಿರುವ ಗಣೇಶ್ ಶೆಟ್ಟಿಗಾರ್ ರವರನ್ನು ದಿನಾಂಕ:12/09/2017 ರಂದು ವಿವಾಹವಾಗಿರುತ್ತಾರೆ. ನಂತರ ಗಣೇಶ್ ಶೆಟ್ಟಿಗಾರನು ಮೋಹಿನಿಯವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ನೀಡುತ್ತಿದ್ದು ದಿನಾಂಕ:15/04/2022 ರಂದು ಆತನ ಮನೆಗೆ ಹೋದವನು  ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ವಾಪಾಸು ಬಂದಿರುವುದಿಲ್ಲ ಎಂದು ದೂರು ನೀಡಲಾಗಿದ್ದು ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

error: No Copying!