ಕಾರ್ಕಳ: ಏಪ್ರಿಲ್ ೨೨(ಹಾಯ್ ಉಡುಪಿ ನ್ಯೂಸ್) ಮನೆ ಯವರು ವಿದೇಶಕ್ಕೆ ತೆರಳಿರುವ ಮಾಹಿತಿ ತಿಳಿದಿದ್ದ ಯಾರೋ ಕಳ್ಳರು ಮನೆ ಕಳ್ಳತನಕ್ಕೆ ಪ್ರಯತ್ನ ನಡೆಸಿರುವ ಘಟನೆ ಕಾರ್ಕಳ ದಲ್ಲಿ ನಡೆದಿದೆ.
ಶ್ರೀಮತಿ ಲಿನೆಟ್ ಪಿಂಟೋ ((74 ) ಎಂಬವರು ಸಾಣೂರು ಗ್ರಾಮದ ಜೋಡುಗರಡಿ ಬಳಿ ಮಗ ಶೋನ್ ಪಿಂಟೋ ಎಂಬವರು ಕಟ್ಟಿಸಿದ ಮನೆಯಲ್ಲಿ ಮಗನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಮಗ ಶೋನ್ ಪಿಂಟೋ ದುಬಾಯಿಯಲ್ಲಿ ಉದ್ಯೋಗದಲ್ಲಿರುತ್ತಾರೆ. ಶಾಲೆಗೆ ರಜೆ ಇದ್ದ ಕಾರಣ ಸೊಸೆ ಮತ್ತು ಮಕ್ಕಳು ಇತ್ತೀಚೆಗೆ ದುಬಾಯಿಗೆ ಹೋಗಿದ್ದು ಲಿನೆಟ್ ಪಿಂಟೋರವರು 21-04-2022 ರಂದು ಸಂಜೆ 7 ಗಂಟೆಗೆ ಮಗಳ ಮನೆಗೆ ಮಲಗಲು ಹೋಗಿದ್ದು ದಿನಾಂಕ 22-04-2022 ರಂದು ಬೆಳಿಗ್ಗೆ 08-30 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಮುಂದಿನ ಹಾಗೂ ಹಿಂದಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಒಳಪ್ರವೇಶಿಸಿ ಮನೆಯೊಳಗೆ ಮೂರು ಬೆಡ್ ರೂಮುಗಳಲ್ಲಿ ಇದ್ದ ಕಪಾಟುಗಳಲ್ಲಿದ್ದ ಬಟ್ಟೆಬರೆಗಳನ್ನು ಎಳೆದು ಹೊರಗೆ ಹಾಕಿ ಮಾಡಿ ಕಳವು ಮಾಡಲು ಪ್ರಯತ್ನಿಸಿರುತ್ತಾರೆ ಎಂದು ನೀಡಿರುವ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ