Spread the love

ಉಡುಪಿ: ಏಪ್ರಿಲ್ ೨೦(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡರ ಆದೇಶದಂತೆ ಉಡುಪಿ ಜಿಲ್ಲಾ ಘಟಕದಿಂದ ಉಡುಪಿ ಜಿಲ್ಲೆಯಲ್ಲಿ ಅನ್ಯ ಭಾಷೆಯ ಹೇರಿಕೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿಣಿ ಶ್ರೀಮತಿ ವೀಣಾ ಜಿ. ಎಸ್. ರವರಿಗೆ , ಉಡುಪಿ ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆ ಅಧಿಕಾರಿಣಿ ಶ್ರೀಮತಿ ಪೂರ್ಣಿಮಾ ಎಮ್. ರವರಿಗೆ, ಉಡುಪಿ ಡಿವೈ ಎಸ್ಪಿ ಶ್ರೀ ಸಿದ್ದಲಿಂಗಪ್ಪ ರವರಿಗೆ ಮನವಿಯನ್ನು ನೀಡಲಾಯಿತು…

ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಜಿಲ್ಲಾದ್ಯಕ್ಷರಾದ ಸುಜಯ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಲ್ಪೋನ್ಸ್ ಮಿನೇಜಸ್, ಜಿಲ್ಲಾ ಮಹಿಳಾ ಘಟಕದ ಸಲಹೆಗಾರ್ತಿ ಸುನಂದ, ಕಾಪು ತಾಲೂಕು ಅಧ್ಯಕ್ಷ ವೀರೇಶ್ ಪಿ. ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಗೀತಾ, ಜಿಲ್ಲಾ ಘಟಕದ ಸದಸ್ಯರಾದ ಮೋಹನ್ ಕಲ್ಮಾಡಿ ಇವರುಗಳು ಉಪಸ್ಥಿತರಿದ್ದರು.

error: No Copying!