IMG_20251102_190007.jpg
Spread the love

ಗಂಗೊಳ್ಳಿ: ದಿನಾಂಕ:02-11-2025(ಹಾಯ್ ಉಡುಪಿ ನ್ಯೂಸ್) ಆಸ್ಟ್ರೇಲಿಯಾದಲ್ಲಿ  ಉದ್ಯೋಗದ ವೀಸಾ ದೊರಕಿಸಿ ಕೊಡುವುದಾಗಿ ನಂಬಿಸಿ ಬೆಂಗಳೂರಿನ ಈರ್ವರು ವ್ಯಕ್ತಿ ಗಳು ಹಲವರಿಗೆ ಸುಮಾರು 87 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಟೀನಾ ನಜರತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ಗುಜ್ಜಾಡಿ ಗ್ರಾಮದ ನಿವಾಸಿ ಟೀನಾ ನಜರತ್ (43) ಎಂಬವರ ಪರಿಚಯದವರಾದ ಹಾಗೂ ಬೆಂಗಳೂರಿನಲ್ಲಿ ಅನೇಕಲ್‌ ಪಬ್ಲಿಕ್‌ ಸ್ಕೂಲ್‌ ನಡೆಸುತ್ತಿರುವ ಆಪಾದಿತರಾದ ಪ್ರಕೃತಿ ಹಾಗೂ ಎಲ್ಟನ್‌ ರೆಬೆರೋ ಎಂಬವರು  2024 ನೇ ಎಪ್ರಿಲ್‌ ನಲ್ಲಿ ಗಂಗೊಳ್ಳಿಗೆ ಬಂದು ಟೀನಾ ನಜರತ್ ರನ್ನು ಭೇಟಿಯಾದ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಉದ್ಯೋಗಕ್ಕೆ ವೀಸಾ ಕೊಡಿಸುತ್ತೇನೆಂದು ನಂಬಿಸಿದ್ದರು ಎನ್ನಲಾಗಿದೆ .

2024 ನೇ ಎಪ್ರಿಲ್‌ ತಿಂಗಳಿನಿಂದ 05/09/2024 ರವರೆಗೆ ಟೀನಾ ನಜರತ್ ರಿಂದ 34,00,000/- ರೂಪಾಯಿ ಹಾಗೂ ಅವರ ಸ್ನೇಹಿತರಾದ ಜೋನ್ಸನ್‌ ಫೆರ್ನಾಂಡಿಸ್‌ 8,00,000/- , ಲೀಟಾ ಪಿಂಟೋ 6,80,000/- , ಸೋಪಿಯಾ ಪಿಂಟೋ 19,50,000/- , ರೀನಾ ಪ್ರವೀಣ ನೊರೊನ್ನಾ 18,00,000/- ಒಟ್ಟು 86,70,000/- ರೂಪಾಯಿ ಹಂತ ಹಂತವಾಗಿ ಆರೋಪಿತರು ಅವರ ಖಾತೆಗೆ ಜಮಾ ಮಾಡಿಸಿಕೊಂಡು, ಆಸ್ಟ್ರೇಲಿಯಾದಲ್ಲಿ ಉದ್ಯೋಗದ ವೀಸಾವನ್ನು ಮಾಡಿಕೊಡದೇ ಹಾಗೂ ಹಣವನ್ನು ವಾಪಾಸ್ಸು ನೀಡದೇ ನಂಬಿಸಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಟೀನಾ ನಜರತ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ  ಕಲಂ: 316(2),318(2), 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!