IMG_20251102_153210.jpg
Spread the love

ಕಾಪು: ದಿನಾಂಕ:02-11-2025(ಹಾಯ್ ಉಡುಪಿ ನ್ಯೂಸ್) ವಿವಾಹಿತ ಯುವತಿಯೋರ್ವಳಿಗೆ ಅವಳ ಗಂಡ ಹಾಗೂ ಗಂಡನ ಮನೆಯವರು ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಾಪು ಉಳಿಯಾರಗೋಳಿ ಗ್ರಾಮದ ನಿವಾಸಿ ಸಪ್ತಶ್ರೀ (28)  ಎಂಬವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 22/01/2025 ರಂದು ಸಪ್ತಶ್ರೀ ರವರನ್ನು ಅವರ ತಂದೆ-ತಾಯಿಯವರು ಕುಂದಾಪುರದ ಮುಳ್ಳಿಕಟ್ಟೆ ನಿವಾಸಿ ವಿವೇಕ್‌ ಎಸ್‌ ಕುಂದರ್‌ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ.

ಇಬ್ಬರೂ ಬೆಂಗಳೂರಿನ HSR Layout ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಆಗಾಗ ಇಬ್ಬರೂ ಕುಂದಾಪುರದ ಮನೆಗೆ ಬಂದುಹೋಗುತ್ತಿದ್ದರು ಎನ್ನಲಾಗಿದೆ .

ಮದುವೆಯಾದಾಗಿನಿಂದ ಸಪ್ತಶ್ರೀ ರವರ ಗಂಡ ಹಾಗೂ ಅವರ ಮನೆಯವರು ಒಂದಲ್ಲ ಒಂದು ಕಾರಣಕ್ಕೆ ಸಪ್ತಶ್ರೀ ರವರೊಂದಿಗೆ ಜಗಳ ಮಾಡುತ್ತಿದ್ದು, ಸಪ್ತಶ್ರೀ ರವರಿಗೆ ಕೈಯಿಂದ ಹೊಡೆದು ಬೆದರಿಕೆ ಹಾಕಿರುತ್ತಾರೆ ಎನ್ನಲಾಗಿದೆ. ನಂತರ ಇಬ್ಬರೂ ಊರಿಗೆ ಬಂದಿದ್ದು ದಿನಾಂಕ 01/11/2025 ರಂದು ಸಪ್ತಶ್ರೀ ರವರು ಕಾಪು ನಲ್ಲಿ ತಮ್ಮ ತಂದೆಯ ಮನೆಯಲ್ಲಿರುವಾಗ್ಗ ಬೆಳಿಗ್ಗೆ ಸಪ್ತಶ್ರೀ ರವರ ಗಂಡ ಹಾಗೂ ಗಂಡನ ತಾಯಿ ವಿಶಾಲಿ, ಗಂಡನ ಅಕ್ಕ ವೈಶಾಲಿ, ಗಂಡನ ಭಾವ ಸಂತೋಷ, ಗಂಡನ ಎರಡನೇ ಅಕ್ಕ ಸುಚಿತ್ರ ರವರು ಸಪ್ತಶ್ರೀ ರವರ ಮನೆಗೆ ಬಂದು ತಂದೆ-ತಾಯಿಯವರಲ್ಲಿ ಬೊಬ್ಬೆ ಹಾಕಿದ್ದು ಅಲ್ಲದೇ ಗಂಡನ ಭಾವ ಸಂತೋಷ ರವರು ಸಪ್ತಶ್ರೀ ರವರಿಗೆ ಜೀವ ಬೆದರಿಕೆ ಹಾಕಿದ್ದು ಮತ್ತು ಸಪ್ತಶ್ರೀ ರವರ ತಂದೆ-ತಾಯಿಯವರಿಗೂ ಬೆದರಿಕೆ ಹಾಕಿ ಮನೆಯಿಂದ ಹೋಗುವಾಗ ಗಂಡ ವಿವೇಕ್‌ ಎಸ್‌ ಕುಂದರ್‌ ಸಪ್ತಶ್ರೀ ರವರನ್ನು ದೂಡಿ ಹೋಗಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸಪ್ತಶ್ರೀ ರವರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಕಲಂ: 85, 115(2), 352, 351(2) R/w 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!