ಕೊಲ್ಲೂರು: ದಿನಾಂಕ :02-11-2025 (ಹಾಯ್ ಉಡುಪಿ ನ್ಯೂಸ್) ವಸತಿಗ್ರಹಕ್ಕೆ ಬರುವ ಗ್ರಾಹಕರನ್ನು ಬೇರೆ ವಸತಿ ಗೃಹಕ್ಕೆ ಕರೆದು ಕಿರುಕುಳ ನೀಡುವುದನ್ನು ಪ್ರಶ್ನಿಸಿದ್ದಕ್ಕೆ ಗಂಭೀರ ಹಲ್ಲೆ ನಡೆಸಿದ ಘಟನೆ ಕೊಲ್ಲೂರಿನ ಯಮುನಾ ವಸತಿ ಗೃಹದ ಬಳಿ ನಡೆದಿದೆ.
ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಯಮುನಾ ವಸತಿ ಗೃಹದ ಬಳಿ ದಿನಾಂಕ:31-10-2025 ರಂದು ಆಪಾದಿತರಾದ ಕಾಂತೇಶ ಹಾಗೂ ಪ್ರವೀಣ್ ಎಂಬುವವರು ಯಮೂನಾ ವಸತಿ ಗೃಹಕ್ಕೆ ಬರುವ ಗ್ರಾಹಕರನ್ನು ಕರೆದ ಕಾರಣಕ್ಕೆ ಮಹೇಂದ್ರ, ಶಿವಮೊಗ್ಗ ಎಂಬವರು ಆಕ್ಷೇಪ ಮಾಡಿದ್ದು, ಅದಕ್ಕೆ ಆಪಾದಿತರು ಅವಾಚ್ಯ ಶಬ್ದಗಳಿಂದ ಬೈದು, ಮಹೇಂದ್ರ ರನ್ನು ಅಡ್ಡಗಟ್ಟಿ ಕುತ್ತಿಗೆ ಒತ್ತಿ ಹಿಡಿದು ಕೈಗಳಿಂದ ಗುದ್ದಿ ಹೊಡೆದಿರುತ್ತಾರೆ ಎನ್ನಲಾಗಿದೆ .
ಗಲಾಟೆ ತಪ್ಪಿಸಲು ಬಂದ ರಂಜಿತ್ ಎಂಬವನಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಹಲ್ಲೆಯಿಂದ ಮಹೇಂದ್ರ ರವರು ಹಾಗೂ ರಂಜಿತ್ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಉಡುಪಿ ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 126(2), 115(2), 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
