ಮಣಿಪಾಲ: ಏಪ್ರಿಲ್ ೨೦(ಹಾಯ್ ಉಡುಪಿ ನ್ಯೂಸ್) ಹೋಟೆಲಿನಲ್ಲಿ ಆರ್ಡರ್ ಮಾಡಿದ್ದ ಬಿರಿಯಾನಿ ಕೊಡಲು ತಡ ಮಾಡಿದರು ಎಂಬ ಕಾರಣಕ್ಕೆ ಗಂಭೀರ ಹಲ್ಲೆ ಮಾಡಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ” ಡಿಷಸ್ ” ಹೋಟೆಲ್ ಗೆ ಬಂದ ನಂದನ್ ಪಡುಕೆರೆ ಎಂಬವರು ಡಿಷಸ್ ಹೋಟೆಲ್ ನವರಾದ ಹೆಚ್.ಎಂ.ತಾಹೀರ್ (೪೮) ಮಣಿಪಾಲ ಎಂಬವರ ಬಳಿ ಬಿರಿಯಾನಿಗೆ ಆರ್ಡರ್ ಮಾಡಿದ್ದು; ಬಿರಿಯಾನಿ ಬೇಗ ಬರಲಿಲ್ಲ ವೆಂದು ಬಿರಿಯಾನಿ ಯಾಕೆ ತಡ ಎಂದು ಅವರನ್ನು ಜೋರು ಮಾಡಿ ಮಾತನಾಡಿಸಿರುತ್ತಾನೆ, ಎಂ.ತಾಹೀರ್ ರವರು ಸ್ವಲ್ಪ ಸಮಾಧಾನದಲ್ಲಿ ಮಾತನಾಡಿ ಎಂದಾಗ ನಾನು ಮಲ್ಪೆ ನಂದನ್ ಪಡುಕೆರೆ ಎಂದು ಎಚ್.ಎಂ.ತಾಹೀರ್ ಅವರನ್ನು ಅವಾಚ್ಯ ಶಬ್ದಗಳಿಂದ ಬ್ಯೆದು ನಿಮ್ಮನ್ನು ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿ ಹೋಟೆಲ್ ನ ಹೊರಗಡೆ ಹೋಗಿ ಹೊರಗಡೆ ಇದ್ದ ಸ್ಯಾನಿಟ್ಯೆಸರ್ ಸ್ಟ್ಯಾಂಡ್ ತೆಗೆದು ತಾಹೀರ್ ರವರ ಎಡ ಕೈಗೆ ಹೊಡೆದಿರುತ್ತಾನೆ. ಆಗ ಬಿಡಿಸಲು ಬಂದ ಹೋಟೆಲ್ ಕೆಲಸಗಾರ ನಿಜಾಮುದ್ದೀನ್ ಗೂ ಹೊಡೆದಿದ್ದು ಈ ಘಟನೆಯಿಂದ ಗಾಯಗೊಂಡ ತಾಹೀರ್ ರವರು ಕೆ.ಎಂ.ಸಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.