ಉಡುಪಿ: ಏಪ್ರಿಲ್ ೧೮(ಹಾಯ್ ಉಡುಪಿ ನ್ಯೂಸ್) ನಗರದ ಹೃದಯ ಭಾಗದಲ್ಲಿರುವ ಅಲಂಕಾರ್ ಚಿತ್ರ ಮಂದಿರದ ಮುಂಭಾಗದಲ್ಲಿ ಚರಂಡಿಯೊಂದು ಬಾಯ್ದೆರೆದು ಕೊಂಡಿದ್ದು ಆಹುತಿಗಾಗಿ ಕಾಯುತ್ತಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.
ಚರಂಡಿಯ ಮೇಲಿನ ಕಾಂಕ್ರೀಟ್ ಸ್ಲ್ಯಾಬ್ ಮುರಿದಿದ್ದು ,ಇದೀಗ ತೆರೆದು ಕೊಂಡಿರುವ ಚರಂಡಿಯಿಂದಾಗಿ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಏನಾದರೂ ದುರ್ಘಟನೆ ನಡೆಯುವ ಮೊದಲೇ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ತೆರೆದು ಕೊಂಡಿರುವ ಚರಂಡಿಯನ್ನು ದುರಸ್ತಿ ಮಾಡಿ ಮುಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ .