ಕಾರ್ಕಳ: ದಿನಾಂಕ :31-10-2025(ಹಾಯ್ ಉಡುಪಿ ನ್ಯೂಸ್) ಟೆಲಿಗ್ರಾಂ ಖಾತೆ ಯಿಂದ ಆನ್ಲೈನ್ ಟಾಸ್ಕ್ ಜಾಬ್ ಎಂದು ನಂಬಿಸಿ ಮಹಿಳೆಯೋರ್ವರಿಗೆ 5.6 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ದೂರಿ ಕೊಂಡಿದ್ದಾರೆ.
ಕಾರ್ಕಳ ಕುಚಿಲಪಾದೆ ನಿವಾಸಿ ನಗೀನ ಬಾನು (38) ಎಂಬವರು ದಿನಾಂಕ 05/10/2025 ರಂದು ಮನೆಯಲ್ಲಿ ಇರುವಾಗ ಅವರಿಗೆ ಅವರ ಟೆಲಿಗ್ರಾಂ ಖಾತೆಯಿಂದ meesho ರವರ mktg Trainer ಎಂಬ ಪೇಜ್ ನಲ್ಲಿ Online Task Job ಬಗ್ಗೆ ಜಾಹೀರಾತು ಬಂದಿದ್ದು ಇದರಲ್ಲಿ https:llenzwk.me ಎಂಬ ಪೇಜ್ ಓಪನ್ ಮಾಡಿ ದಿನಾಂಕ 05/10/2025 ರಂದು 200 ರೂ ಹಾಗೂ 500 ರೂ ಗಳನ್ನು ಆರೋಪಿಗಳು ನೀಡಿದ ಸ್ಕಾನರ್ ಗೆ ಕಳುಹಿಸಿದ್ದು ಇದಕ್ಕೆ ಲಾಭಾಂಶವಾಗಿ 450 ರೂ ಗಳನ್ನು ಹಾಕಿದ ಮೇರೆಗೆ ನಂತರ ಅಪರಿಚಿತರು ಜಾಸ್ತಿ ಟಾಸ್ಕ್ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಬಳಿಕ ಹೆಚ್ಚಿನ ಹಣ ಹಾಕುವಂತೆ ತಿಳಿಸಿದ್ದು ಅದರಂತೆ ನಗೀನ ಬಾನುರವರು ದಿನಾಂಕ 06/10/2025 ರಿಂದ ದಿನಾಂಕ 17.10.2025 ರವರೆಗೆ ಆರೋಪಿತರು ಕಳುಹಿಸಿದ್ದ ಸ್ಕ್ಯಾನರ್ . UPI ಹಾಗೂ ಬ್ಯಾಂಕ್ ಖಾತೆಗಳಿಗೆ ಒಟ್ಟು ಮೊತ್ತ 5,58,975/-ರೂಪಾಯಿ ವರ್ಗಾವಣೆ ಮಾಡಿರುತ್ತಾರೆ ಎನ್ನಲಾಗಿದೆ.
ಆರೋಪಿಗಳು ನಗೀನ ಬಾನುರವರು ಹಾಕಿದ ಹಣವನ್ನು ಹಾಗೂ ಲಾಭಾಂಶವನ್ನು ಸಹ ನೀಡದೇ ಮೋಸ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 66(D) IT ACT ರಂತೆ ಪ್ರಕರಣ ದಾಖಲಾಗಿದೆ.
