IMG_20251031_201950.jpg
Spread the love

ಬ್ರಹ್ಮಾವರ: ದಿನಾಂಕ:31-10-2025(ಹಾಯ್ ಉಡುಪಿ ನ್ಯೂಸ್)ಹಂದಾಡಿ ಗ್ರಾಮದ ಯುವಕನೋರ್ವ ನಿಗೆ ಆರು ಜನ ಯುವಕರ ತಂಡ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರ ಹಂದಾಡಿ ಗ್ರಾಮದ ನಿವಾಸಿ ನಿತಿನ್‌ (26), ಎಂಬವರು ದಿನಾಂಕ 29/10/2025 ರಂದು ರಾತ್ರಿ ಬಾರ್ಕೂರಿನಲ್ಲಿ ಇರುವಾಗ, 1 ನೇ ಆರೋಪಿ ಸಂಪತ್‌ ಎಂಬಾತನು ‌ ಕರೆ ಮಾಡಿ ಎಲ್ಲಿದ್ದೀಯ ಎಂದು ಕೇಳಿ, ಸ್ವಲ್ಪ ಸಮಯದ ಬಳಿಕ ನಿತಿನ್ ರವರು ಇದ್ದಲ್ಲಿಗೆ ಸಂಪತ್, ಅಭಿಷೇಕ್‌ ಪಾಲನ್, ರಕ್ಷತ್‌, ಸನತ್‌ ಮತ್ತು ಚೇತನ್‌ ಎಂಬವರುಗಳು ಬೈಕಿನಲ್ಲಿ ಮತ್ತು ಕಾರಿನಲ್ಲಿ ಬಂದು, ಅವರೆಲ್ಲರೂ ಸೇರಿ ನಿತಿನ್ ರವರನ್ನು ಕಾರಿನಲ್ಲಿ ಎಳೆದು ಕೂರಿಸಿಕೊಂಡು ಬ್ರಹ್ಮಾವರ ತಾಲೂಕು 52 ನೇ ಹೇರೂರು ಗ್ರಾಮದ ಕೆ.ಇ.ಬಿ ಬಳಿ ಇರುವ ಗ್ರೌಂಡ್‌ ಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಅಲ್ಲಿ ನಿತಿನ್ ರವರನ್ನು ಕಾರಿನಿಂದ ಕೆಳಗಿಳಿಸಿದ್ದು, ಆ ಕಾರಿನಲ್ಲಿ ತಲವಾರು, ರಾಡ್‌ ಇದ್ದು, ಎಲ್ಲರೂ ಅವರನ್ನು ಸುತ್ತುವರಿದು ನಿಂತು, ಬಳಿಕ 2 ನೇ ಆರೋಪಿತ ಅಭೀಷೇಕ್‌ ಪಾಲನ್‌ ಎಂಬಾತನು ಕೈಯಿಂದ ನಿತಿನ್ ರವರ ಎಡ ಕೆನ್ನೆಗೆ ಹೊಡೆದು ಬಳಿಕ ಅವಾಚ್ಯವಾಗಿ ಬೈದು ಕಾರಿನಿಂದ ರಾಡ್‌ ತೆಗೆದು ನಿತಿನ್ ರವರಿಗೆ ಬೀಸಿದಾಗ, ಅದನ್ನು ಕೈಯಿಂದ ಹಿಡಿದಿದ್ದು, ಈ ವೇಳೆ ರಾಡ್‌ ನಿತಿನ್ ರವರ ಎಡ ಕಿವಿಯ ಬಳಿ ತಾಗಿರುತ್ತದೆ ಎನ್ನಲಾಗಿದೆ .ಬಳಿಕ ಉಳಿದವರು ನಿತಿನ್ ರಿಗೆ ಹಿಂದಿನಿಂದ ದೂಡಿ ಕೈಯಿಂದ ಹೊಡೆದಿದ್ದು ಈ ಘಟನೆ ನಡೆಯುವಾಗ ಚೇತನ್‌ ಮತ್ತು ಆಕಾಶ್‌ ಎಂಬುವವರು ಸ್ಥಳದಲ್ಲಿ ಇದ್ದಿರುತ್ತಾರೆ ಎನ್ನಲಾಗಿದೆ.

ಈ ವೇಳೆ ನಿತಿನ್ ರವರು ಬೊಬ್ಬೆ ಹೊಡೆಯುವುದನ್ನು ಕೇಳಿ ಜನರು ಅಲ್ಲಿಗೆ ಬರುವುದನ್ನು ಕಂಡ ಆರೋಪಿಗಳು ನಿತಿನ್ ರವರನ್ನು ಪುನಃ ಕಾರಿನಲ್ಲಿ ತುಂಬಿಕೊಂಡು ನಂತರ ಸಂಪತ್‌ ಮತ್ತು ಪಾಲನ್‌ ರವರು ಕಾರಿನಲ್ಲಿ ಹೊಟ್ಟೆಗೆ ಮತ್ತು ಕುತ್ತಿಗೆಗೆ ಹೊಡೆದ ಪರಿಣಾಮ ನಿತಿನ್ ರವರು ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ಬಾರ್ಕೂರು ಬ್ರಿಡ್ಜ್‌ ಬಳಿ ಬಿಟ್ಟು ಹೋಗಿದ್ದು, ಮಧ್ಯರಾತ್ರಿ ವೇಳೆಗೆ ನಿತಿನ್ ರವರು ಎಚ್ಚರಗೊಂಡು ಮನೆಗೆ ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಿತಿನ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ: 137(2), 109(1), 115(2), 352 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!