images-13.jpeg
Spread the love

ದಿನಾಂಕ: 31-10-2025 (ಹಾಯ್ ಉಡುಪಿ ನ್ಯೂಸ್)

2025ರ ಅತೀ ಹೆಚ್ಚಿನ ಗಳಿಕೆಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಾಂತಾರ 1’ ಕರ್ನಾಟಕದಲ್ಲೇ 250 ಕೋಟಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವು ನವೆಂಬರ್‌ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕಾಂತಾರ 1’ ಚಿತ್ರದ ಟಿಕೆಟ್‌ ಬೆಲೆ ಕಡಿಮೆ ಮಾಡಿದೆ.

ಹೀಗಾಗಿ ನಾಳೆಯಿಂದ ರಿಷಬ್‌ ಶೆಟ್ಟಿ ನಟನೆ, ನಿರ್ದೇಶನ, ಹೊಂಬಾಳೆ ಫಿಲಮ್ಸ್‌ ನಿರ್ಮಾಣದ ‘ಕಾಂತಾರ 1’ ಚಿತ್ರವನ್ನು ರಾಜ್ಯದ ಎಲ್ಲಾ ಸಿಂಗಲ್‌ ಸ್ಕ್ರೀನ್‌ಗಳಲ್ಲಿ 99 ₹ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ₹.ಗೆ ನೋಡಬಹುದು. ಅಕ್ಟೋಬರ್‌ 31ರಿಂದಲೇ ಈ ಹೊಸ ಆಫರ್‌ ಜಾರಿಗೆ ಬರಲಿದೆ.

ಇಂದಿನಿಂದ ಪ್ರೈಮ್‌ ವೀಡಿಯೋದಲ್ಲಿಯೂ ಕಾಂತಾರ 1 ಸಿನಿಮಾವನ್ನು ವೀಕ್ಷಿಸಬಹುದು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ  ಸಿನಿಮಾ ನೋಡಬಹುದು.

error: No Copying!