Spread the love

ಕೋಟ: ಏಪ್ರಿಲ್ ೧೬(ಹಾಯ್ ಉಡುಪಿ ನ್ಯೂಸ್) ಹಳ್ಳಾಡಿ ಬಾರ್ ಬಳಿ ಇಸ್ಪೀಟ್ ಆಡುತ್ತಿದ್ದವರನ್ನು ಬಂಧಿಸಲಾಗಿದೆ.

ಕುಂದಾಪುರ ತಾಲೂಕು ಹಳ್ಳಾಡಿ, ಹರ್ಕಾಡಿ ಗ್ರಾಮದ ತಲ್ಲೂರು ಬಾರ್ ಹಿಂಭಾಗದ ಖಾಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಸೇರಿಕೊಂಡು ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟ ಆಡುತ್ತಿರುವುದನ್ನು ಗಮನಿಸಿದ ಕೋಟ ಪೊಲೀಸ್ ಠಾಣಾ ಬೀಟ್ ಸಿಬ್ಬಂದಿ ರಾಘವೇಂದ್ರರವರು ಕೋಟ ಠಾಣಾ ಎಎಸ್ಐ ಗಣೇಶ ಪೈ ಯವರಿಗೆ ಮಾಹಿತಿ ನೀಡಿದ್ದು ಅದರಂತೆ ಎ.ಎಸ್.ಐ ಗಣೇಶ ಪೈಯವರು ಇಲಾಖಾ ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಗಳೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದಾಗ ಬಾರ್ ನ ಹಿಂಭಾಗದ ಹಾಡಿಯಲ್ಲಿ ನೆಲಕ್ಕೆ ಹಳೆಯ ದಿನಪತ್ರಿಕೆಯ ಹಾಳೆ ಗಳನ್ನು ಹಾಸಿ ಇಸ್ಪೀಟ್ ಎಲೆಗಳನ್ನು ಹಿಡಿದು ಕೊಂಡು ಅಂದರ್ ಬಾಹರ್ ಎಂದು ಹಣ ಕಟ್ಟುತ್ತಿದ್ದ ೧) ದಿವಾಕರ (30) ಹೆಮ್ಮಾಡಿ, ಹರ್ಕಾಡಿ ೨)ಶರತ್ (24) ನಂದಿಕೇಶ್ವರ ಕ್ರಪಾ, ಹಳ್ಳಾಡಿ ೩) ಮಧುಕರ (25) ನರಾಡಿ ,ಯಡಾಡಿ, ಮತ್ಯಾಡಿ ಗ್ರಾಮ ೪) ಕೇಶವ ( 47) ಅನುಗ್ರಹ ನಿಲಯ,ಹಳ್ಳಾಡಿ, ಹರ್ಕಾಡಿ ೫) ಹರೀಶ್ (29) ತುಂಬಿ ಮಕ್ಕಿ, ಮತ್ಯಾಡಿ ಗ್ರಾಮ ೬) ಭಾಸ್ಕರ ಮೊಗವೀರ (49) ಗಡ್ಡಿ ಮನೆ, ಹಳ್ಳಾಡಿ ಇವರನ್ನು ಬಂಧಿಸಿರುತ್ತಾರೆ. ಜುಗಾರಿ ಆಟಕ್ಕೆ ಬಳಸಿದ ನಗದು 3,400 ರೂಪಾಯಿಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!