ಬ್ರಹ್ಮಾವರ ಏಪ್ರಿಲ್ ೧೨( ಹಾಯ್ ಉಡುಪಿ ನ್ಯೂಸ್) ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಗ್ರಹಿಣಿಯೋರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬ್ರಹ್ಮಾವರ ಬಳಿ ದಂಪತಿಗಳೀರ್ವರು ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಹಾವೊಂದು ರಸ್ತೆಗೆ ಅಡ್ಡ ಬಂದಿದ್ದು ; ಹಾವನ್ನು ತಪ್ಪಿಸಲು ಸಡನ್ನಾಗಿ ಬ್ರೇಕ್ ಹಾಕಿದ ಕಾರಣ ದ್ವಿಚಕ್ರ ವಾಹನ ಅಡ್ಡ ಬಿದ್ದಿದ್ದು ಪತಿ, ಪತ್ನಿ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಮನೆಗೆ ತೆರಳಿದ್ದರು ಎನ್ನಲಾಗಿದೆ. ಮನೆಯಲ್ಲಿ ಪತ್ನಿಗೆ ಭುಜದಲ್ಲಿ ನೋವು ಕಾಣಿಸಿಕೊಂಡಿದ್ದು ಇದರ ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ಧು ಅಲ್ಲಿ ಪರೀಕ್ಷಿಸಿದ ವೈದ್ಯರು ಭುಜದ ಮೂಳೆಯಲ್ಲಿ ಬಿರುಕು ಆಗಿದ್ದು ಸಣ್ಣ ಆಪರೇಶನ್ ನ ಅಗತ್ಯವಿದೆ ಎಂದು ಹೇಳಿದ್ದರು ಎನ್ನಲಾಗಿದೆ.
ಆಪರೇಷನ್ ಗೆ ಮನೆಯವರು ಒಪ್ಪಿಗೆ ಸೂಚಿಸಿದ್ದು ಶಸ್ತ್ರಚಿಕಿತ್ಸೆ ಗೂ ಮೊದಲು ಆಸ್ಪತ್ರೆಯಲ್ಲಿ ನರ್ಸ್ ಓರ್ವರು ಅರಿವಳಿಕೆ ಚುಚ್ಚುಮದ್ದು ನೀಡಿದ್ದು . ಆಪರೇಷನ್ ಆದ ನಂತರವೂ ಸಮಯಕ್ಕೆ ಸರಿಯಾಗಿ ರೋಗಿಗೆ ಪ್ರಜ್ಞೆ ಬಾರದ ಕಾರಣ ತುರ್ತಾಗಿ ರೋಗಿಯನ್ನು ಮಣಿಪಾಲಕ್ಕೆ ಕರೆದೊಯ್ಯುವಂತೆ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದು;ಆ ಕೂಡಲೇ ರೋಗಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ ಎಂದಿದ್ದಾರೆ.
ಅಲ್ಲಿಯೂ ರೋಗಿಗೆ ಪ್ರಜ್ಞೆ ಬಾರದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಗ್ರಹಿಣಿ ಸಾವನ್ನಪ್ಪಿದ್ದಾರೆ. ಖಾಸಗಿ ಆಸ್ಪತ್ರೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಓರ್ವ ಹದಿಹರೆಯದ ಗ್ರಹಿಣಿ ಸಾವನ್ನಪ್ಪಿದ್ದಾರೆ. ಇಬ್ಬರು ಪುಟ್ಟ ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥವಾಗಿವೆ ಎಂದು ಸಂಬಂಧಿಕರು ರೋಧಿಸುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ವಾಡಬಾರದು. ತಮ್ಮಲ್ಲಿ ನುರಿತ ಅರಿವಳಿಕೆ ತಜ್ಞರಿಲ್ಲ, ತಜ್ಞ ವೈದ್ಯರುಗಳಿಲ್ಲವೆಂದಾದಲ್ಲಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸ ಬಾರದು. ಏನೂ ತುರ್ತು ಅವಶ್ಯಕತೆಗಳಿಲ್ಲದೆ ಶಸ್ತ್ರ ಚಿಕಿತ್ಸೆ ನಡೆಸಿ ಕೊನೆಗೆ ಪ್ರಾಣ ಹೋದ ಮೇಲೆ ಮಣಿಪಾಲ ಆಸ್ಪತ್ರೆಗೆ ಹೋಗಿ ಅಲ್ಲಿ ಡೆತ್ ಸರ್ಟಿಫಿಕೇಟ್ ಪಡೆಯಿರಿ ಎಂದು ಕಳುಹಿಸುವುದಾದ ರೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯವರು ಶಸ್ತ್ರ ಚಿಕಿತ್ಸೆ ನಡೆಸುವ ಅವಶ್ಯಕತೆ ಇತ್ತೇ ಎಂದು ನೊಂದವರು ಪ್ರಶ್ನಿಸಿದ್ದಾರೆ.
ಇನ್ನಾದರೂ ಖಾಸಗಿ ಆಸ್ಪತ್ರೆಯವರು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ವಾಡಬಾರದು. ನೀವು ಮಾಡುವ ತಪ್ಪಿನಿಂದ ಯಾರನ್ನೂ ಅನಾಥರಾಗಿಸಬೇಡಿ.