ದಿನಾಂಕ:19-10-2025(ಹಾಯ್ ಉಡುಪಿ ನ್ಯೂಸ್)
ನಂದಿಕೂರು: ಪಡುಬಿದ್ರಿ ಯಿಂದ ಕಾರ್ಕಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ನಂದಿಕೂರು ಸಮೀಪದ ಕೊಳಚೂರು ಶ್ರೀ ಬ್ರಹ್ಮಬೈದರ್ಕಳ ಗರಡಿ ಸಮೀಪದ ರಾಜ್ಯ ಹೆದ್ದಾರಿಯ ರೈಲ್ವೇ ಸೇತುವೆಯ ಕಾಂಕ್ರೀಟ್ ಕಿತ್ತು ಹೋಗಿ ಇದೀಗ ಕಾಂಕ್ರೀಟ್ ಮಧ್ಯದಲ್ಲಿರುವ ಸರಳುಗಳೂ ಮುರಿದು ಹೋಗುತ್ತಿದ್ದು ಸೇತುವೆ ಶಿಥಿಲ ಗೊಂಡಿದೆ.
ಸೇತುವೆ ಯ ಮೇಲಿನ ಕಾಂಕ್ರೀಟ್ ಎದ್ದು ಹೋಗಿ ಸೇತುವೆ ಬ್ರಹತ್ ಹೊಂಡ ಗುಂಡಿಗಳಿಂದ ತುಂಬಿ ಹೋಗಿದೆ. ಸೇತುವೆಯ ಮೇಲೆ ವಾಹನ ಸಂಚಾರ ನಡೆಸುವುದೇ ಅಪಾಯಕಾರಿಯಾಗಿದ್ದು ದ್ವಿಚಕ್ರ ವಾಹನ ಸವಾರರು ಪ್ರಾಣ ಭಯದಿಂದ ಸೇತುವೆಯ ಮೇಲೆ ಸಂಚರಿಸುವಂತೆ ಆಗಿದೆ.
ದಿನನಿತ್ಯ ಸಾವಿರಾರು ಶಾಲಾ,ಕಾಲೇಜು ಮಕ್ಕಳು ಅಪಾಯ ದ ಭಯದಲ್ಲೇ ಈ ಸೇತುವೆಯ ಮೇಲೆ ಸಂಚರಿಸುತ್ತಿದ್ದಾರೆ.
ಇಂತಹ ದುರವಸ್ಥೆ ಯಲ್ಲಿರುವ ಸೇತುವೆಯನ್ನು ದಿನನಿತ್ಯ ಕಂಡೂ ಕಾಣದಂತೆ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳು ಏನೂ ಆಗಿಲ್ಲ ಎಂದು ಆ ಸೇತುವೆ ಯ ಮೇಲೆಯೇ ಸರಕಾರಿ ವಾಹನದಲ್ಲಿ ಸಂಚರಿಸುತ್ತಾ ತೆಪ್ಪಗಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಗಳಾದರೂ ಶಿಥಿಲಾವಸ್ಥೆಯಲ್ಲಿರುವ ನಂದಿಕೂರು ರೈಲ್ವೇ ಸೇತುವೆ ಯ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಸೇತುವೆ ದುರಸ್ಥಿ ನಡೆಸುವಂತೆ ಕ್ರಮ ಕೈಗೊಳ್ಳಬೇಕಿದೆ.






