ಪುರಸಭೆ ಮುಖ್ಯಾಧಿಕಾರಿಯವರು ಹಾಗೂ ಪರಿಸರ ಅಭಿಯಂತರ ನೇತೃತ್ವದಲ್ಲಿ ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿರುವ ಫಾಸ್ಟ್ ಫುಡ್ ಗೂಡಂಗಡಿಗಳಿಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು ಪ್ಲಾಸ್ಟಿಕ್ ಶುಚಿತ್ವ ಹಾಗೂ ನೈರ್ಮಲ್ಯ ಕುರಿತು ಪರಿಶೀಲಿಸಿ ಸೂಕ್ತ ಸೂಚನೆ ಹಾಗೂ ತಿಳುವಳಿಕೆ ನೀಡಿದರು. ಮುಂದಿನ ದಿನಗಳಲ್ಲಿ ಸೂಚನೆ ಹಾಗೂ ತಿಳುವಳಿಕೆ ಪಾಲಿಸದೆ ಇದ್ದಲ್ಲಿ ಕಾನೂನು ಕ್ರಮ ವಹಿಸಲಾಗುವುದೆಂದು ಕಚೇರಿಯ ವ್ಯವಸ್ಥಾಪಕರಾದ ಸೂರ್ಯಕಾಂತ ಖಾರ್ವಿ ರವರು ತಿಳಿಸಿದ್ದಾರೆ.
