ಉಡುಪಿ: ಏಪ್ರಿಲ್ ೧೦ (ಹಾಯ್ ಉಡುಪಿ ನ್ಯೂಸ್)ಸೇವಾ ನಿರತ ಹಾಗೂ ನಿವ್ರತ್ತ ಪೊಲೀಸ್ ರಿಗೆ ವೇತನ ತಾರತಮ್ಯ ಹಾಗೂ ಆರೋಗ್ಯ ಭಾಗ್ಯದ ನ್ಯೂನತೆಗಳನ್ನು ಸರಿಪಡಿಸುವ ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ.
ಮನವಿಯಲ್ಲಿ ಔದಾಧ್ಕರ್ ವರದಿಯ ಪ್ರಕಾರ ಕೆಸಿಎಸ್ಆರ್ ನಿಯಮ ೪೩ರಂತೆ ಕೇವಲ ಹೊಸದಾಗಿ ಆಯ್ಕೆಯಾಗಿರುವ ಸಿಬ್ಬಂದಿಯವರಿಗೆ ವೇತನ ಹೆಚ್ಚಳ ಮಾಡಿದ್ದು ಇತರ ಸೇವಾ ನಿರತ ಹಾಗೂ ನಿವ್ರತ್ತ ಸಿಬ್ಬಂದಿಯವರಿಗೆ ಇದರಿಂದ ಅನ್ಯಾಯ ವಾಗಿದೆ.ಈ ವೇತನ ತಾರತಮ್ಯವನ್ನು ಕೂಡಲೇ ಸರಿಪಡಿಸಿ ಸುಮಾರು ೧,೫೦,೦೦೦(ಒಂದು ಲಕ್ಷ ಐವತ್ತು ಸಾವಿರ) ಸೇವಾ ನಿರತ ಹಾಗೂ ನಿವ್ರತ್ತ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರಿಗೆ ನ್ಯಾಯ ಕೊಡಿಸುವಂತೆ ಮನವಿಯಲ್ಲಿ ಕೇಳಿ ಕೊಳ್ಳಲಾಗಿದೆ.
ಪೊಲೀಸ್ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಇತ್ತೀಚಿನ ಸುಮಾರು ನಾಲ್ಕೈದು ವರ್ಷಗಳಿಂದ Non medical charges ಎಂಬ ಹೆಸರಿನಲ್ಲಿ ಆಸ್ಪತ್ರೆ ಬಿಲ್ಲಿನ ಮೊತ್ತದಲ್ಲಿ ಸಿಬ್ಬಂದಿಯವರಿಂದ ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದಾರೆ.ನಿವ್ರತ್ತರಿಗೆ ಕೇವಲ ರೂಪಾಯಿ ೧,೦೦,೦೦೦(ಒಂದು ಲಕ್ಷ ರೂಪಾಯಿವರೆಗೆ) ಹಾಗೂ ಶಸ್ತ್ರಚಿಕಿತ್ಸೆಗೆ ರೂ ೨,೦೦,೦೦೦,(ರೂಪಾಯಿ ಎರಡು ಲಕ್ಷ)ದವರೆಗೆ ಆರೋಗ್ಯ ಭಾಗ್ಯ ದ ಕ್ಲೇಮ್ ಆಗುತ್ತಿದೆ.ಇದರಲ್ಲೂ ಅನೇಕ ತೊಡಕುಗಳಿವೆ ಇದನ್ನು ನಿವಾರಣೆ ಮಾಡುವಂತೆ ಮನವಿಯಲ್ಲಿ ಕೇಳಿ ಕೊಳ್ಳಲಾಗಿದೆ.
ಆಡರ್ಲಿ ಪದ್ಧತಿ ನಿಷೇಧ ಮಾಡಿದ್ದರೂ ಅದು ಇನ್ನೂ ಸರಿಯಾಗಿ ಕಾರ್ಯಗತಗೊಂಡಿಲ್ಲ.ಇನ್ನೂ ಕರ್ನಾಟಕದಲ್ಲಿ ನೂರಾರು ಸಿಬ್ಬಂದಿಗಳನ್ನು ಮೇಲಾಧಿಕಾರಿಗಳ ಮನೆಯಲ್ಲಿ ಅಡುಗೆ ಹಾಗೂ ಇನ್ನಿತರ ಕೆಲಸಗಳಿಗೆ ಬಳಸಿ ಕೊಳ್ಳುತ್ತಿದ್ದಾರೆ.ಇದರ ಬದಲಿಗೆ ಫಾಲೋವರ್ಸ್ Appoint ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿಯಲ್ಲಿ ಕೇಳಿ ಕೊಳ್ಳಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಪೊಲೀಸ್ ಆತ್ಮಹತ್ಯೆ ಸಂಖ್ಯೆ ೨೫೦ ದಾಟಿದೆ. ಇದಕ್ಕೆಲ್ಲಾ ಮೂಲ ಕಾರಣ ಇವರ ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡ. ವೇತನ , ಆರೋಗ್ಯ ,ಸಿಬ್ಬಂದಿ ಕೊರತೆ ಹಾಗೂ ಆಡರ್ಲಿ ಪದ್ಧತಿ ಸಂಪೂರ್ಣ ನಿರ್ನಾಮ ಮಾಡಿದರೆ ಸಿಬ್ಬಂದಿ ಆತ್ಮಹತ್ಯೆ ಕೂಡಾ ಕಡಿಮೆಯಾಗಬಹುದು ಎಂದು ಮಾನ್ಯ ಮುಖ್ಯಮಂತ್ರಿ ಹಾಗೂ ಗ್ರಹ ಮಂತ್ರಿ, ಶಾಸಕರು ಮತ್ತು ಸಚಿವರಲ್ಲಿ ನಿವ್ರತ್ತ ಪೊಲೀಸ್ ಸಂದೀಪ್ ಕುಮಾರ್.ಎಂ ಅವರು ಮನವಿ ಸಲ್ಲಿಸುವ ಮೂಲಕ ಮನವಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.