Spread the love

ಬೆಂಗಳೂರು: ಏಪ್ರಿಲ್ ೯(ಹಾಯ್ ಉಡುಪಿ ನ್ಯೂಸ್) ಬಿಜೆಪಿ ಯ ಭ್ರಷ್ಟಾಚಾರ ಕಾಂಗ್ರೆಸ್ ನ ಸತತ ಸೋಲಿನಿಂದ ಹಾಗೂ ನಾಯಕರ ಮುಸುಕಿನ ಗುದ್ದಾಟದಿಂದ ಬೇಸತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ಪ್ರಭಾವಿ ನಾಯಕರು ಪರ್ಯಾಯ ಪಕ್ಷ ವಾಗಿ ಜೆಡಿಎಸ್ ಬದಲು ಆಫ್ ಪಕ್ಷವನ್ನು ಆಯ್ಕೆ ಮಾಡಿ ಕೊಂಡಿದ್ದಾರೆ ಎಂದು ಆಫ್ ಕರ್ನಾಟಕ ಉಸ್ತುವಾರಿ ದಿಲೀಪ್ ಪಾಂಡೆ ಅವರು ಹೇಳಿದ್ದಾರೆ..

ದೆಹಲಿ ಮತ್ತು ಪಂಜಾಬ್ ನಲ್ಲಿ ಜಯಿಸಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಯತ್ತ ಗಮನ ಹರಿಸಿದ್ದು ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ನಿವ್ರತ್ತ ಐ.ಪಿ.ಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಗೊಂಡ ನಂತರ ಇದೀಗ ಇನ್ನೊಬ್ಬರು‌ ನಿವ್ರತ್ತ ಕೆ.ಎ.ಎಸ್ ಅಧಿಕಾರಿ ಮಥಾಯಿ ಅವರು ಆಮ್ ಆದ್ಮಿ ಪಕ್ಷ ಕ್ಕೆ ಸೇರ್ಪಡೆ ಗೊಳ್ಳಲಿದ್ದಾರೆಂದು ಹೇಳಲಾಗಿದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಕೆ. ಮಥಾಯಿಯವರು ಕರ್ನಾಟಕ ಸರ್ಕಾರದ ಸಕಾಲ, ಬಿಬಿಎಂಪಿ ಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ೨೦೨೦ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.ತಮ್ಮ ದಿಟ್ಟ ಕ್ರಮಗಳಿಂದ ಹಲವಾರು ಬಾರಿ ಸರ್ಕಾರವನ್ನು ಮುಜುಗರಕ್ಕೀಡುಮಾಡಿದ್ದರು . ಆಮ್ ಆದ್ಮಿ ಪಕ್ಷ ಏಪ್ರಿಲ್ ೨೧ ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಲಿರುವ ರೈತ ಸಂಘದ ಕಾರ್ಯಕ್ರಮದಲ್ಲಿ ಮಥಾಯಿ ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.ಈ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಇದೇ ಕಾರ್ಯಕ್ರಮ ದಲ್ಲಿ ರೈತ ಸಂಘದ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಸಾವಿರಾರು ಬೆಂಬಲಿಗರೊಂದಿಗೆ ಆಪ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದಲೂ ಹಲವು ನಾಯಕರು ಆಮ್ ಆದ್ಮಿ ಪಕ್ಷವನ್ನು ಸೇರುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಯು ಭಾರೀ ಜಿದ್ದಾ ಜಿದ್ದಿಯಲ್ಲಿ ನಡೆಯುವ ನಿರೀಕ್ಷೆಗೆ ಮುನ್ನುಡಿ ಬರೆದಂತಾಗಿದೆ.ಬಿಜೆಪಿ ,ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧಿ ಗಳೆಲ್ಲರೂ ಆಮ್ ಆದ್ಮಿ ಪಕ್ಷವನ್ನು ಸೇರಿಕೊಳ್ಳಲಿದ್ದು ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ತಳಮಟ್ಟದಿಂದ ಬೆಳೆಯಲಿದ್ದು ಸಮಾನ ಮನಸ್ಕರೆಲ್ಲರೂ ಜೊತೆಯಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಬಲ ಪ್ರತಿ ಸ್ಪರ್ಧಿಯಾಗಿ ಹೊರ ಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ರಾಜಕೀಯ ತಜ್ನರ ಅಭಿಪ್ರಾಯ ವಾಗಿದೆ.

error: No Copying!