ಕೊಲ್ಲೂರು: ದಿನಾಂಕ:30-09-2025 (ಹಾಯ್ ಉಡುಪಿ ನ್ಯೂಸ್) ಮೂಕಾಂಬಿಕಾ ದೇವಸ್ಥಾನದಲ್ಲಿ ತಮಿಳುನಾಡಿನ ಯಾತ್ರಾರ್ಥಿ ದೇವಿಪ್ರಿಯಾ ಎಂಬವರ ಚಿನ್ನದ ಸರ ಕಳ್ಳತನ ವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ತಮಿಳುನಾಡು ನಿವಾಸಿ ದೇವಿಪ್ರಿಯಾ (37) ಎಂಬವರು ತನ್ನ ಕುಟುಂಬದವರ ಜೊತೆ ದಿನಾಂಕ 25/09/2025 ರಂದು ಬೈಂದೂರು ತಾಲೂಕಿನ, ಕೊಲ್ಲೂರು ಗ್ರಾಮದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ರಾತ್ರಿ ದೇವಸ್ಥಾನದ ದ್ವಜಸ್ಥಂಬದ ಜನ ಸಂದಣಿಯಲ್ಲಿ ಇರುವ ಸಮಯ, ಯಾರೋ ಕಳ್ಳರು ದೇವಿ ಪ್ರಿಯಾರು ಭುಜದಲ್ಲಿ ಇರಿಸಿಕೊಂಡಿದ್ದ ರೆಕ್ಸಿನ್ ಬ್ಯಾಗ್ ನ ಜಿಪ್ ತೆಗೆದು ಅದರೊಳಗೆ ಇಟ್ಟುಕೊಂಡಿದ್ದ ಅಂದಾಜು ಸುಮಾರು 3 ಪವನ್ ನ ಹವಳದ ಚಿನ್ನದ ಸರವನ್ನು ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ : 303(2) BNS ರಂತೆ ಪ್ರಕರಣ ದಾಖಲಾಗಿದೆ.
