ಮಲ್ಪೆ: ದಿನಾಂಕ:30-09-2025 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ನಿವಾಸಿ ಬಸ್ ಮಾಲೀಕ ಸೈಫುದ್ದೀನ್ ಎಂಬವರನ್ನು ಅವರ ಸ್ನೇಹಿತರು ವ್ಯವಹಾರದ ಬಗ್ಗೆ ಮಾತುಕತೆ ನಡೆಸಲು ಎಂದು ಕರೆದು ಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಸೈಫುದ್ದೀನ್ ಅವರ ಪುತ್ರ ಅಬ್ದುಲ್ ಅಂಜಿಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ,ಶಿವಳ್ಳಿ ಗ್ರಾಮದ ನಿವಾಸಿ ಅಬ್ದುಲ್ ಅಂಜಿಲ್ (18) ಇವರ ತಂದೆ ಸೈಯಿಪುದ್ದಿನ್ (52) ಇವರು ಖಾಸಗಿ ಬಸ್ಸು ವ್ಯವಹಾರ ನಡೆಸಿಕೊಂಡಿದ್ದು, ಉಡುಪಿ ಕುಕ್ಕಿಕಟ್ಟೆಯ ನಿವಾಸಿಯಾದ ಫೈಜಲ್ ಖಾನ್ ಮತ್ತು ಉಡುಪಿ ದೊಡ್ಡಣಗುಡ್ಡೆ ನಿವಾಸಿ ಶರೀಪ್ ಇವರು ಸೈಯಿಪುದ್ದಿನ್ ರವರ ಸ್ನೇಹಿತರಾಗಿದ್ದು ದಿನಾಂಕ 27/09/2025 ರಂದು ಬೆಳಿಗ್ಗೆ ಫೈಜಲ್ ಖಾನ್ ನು ಅವರ ಮನೆಗೆ ಬಂದು ಬಸ್ಸಿನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗಲು ಇದೆ ಎಂದು ಹೇಳಿ ಫೈಜಲ್ ಖಾನ್ ನೊಂದಿಗೆ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಎ.ಕೆ ಕೋಟೇಜ್ ಮನೆಯ ಬಳಿಯಿಂದ ಅವರ KA-19-MN-9062 ನೇ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಹೋಗಿದ್ದು ಅವರ ಸ್ನೇಹಿತ ಫೈಜಲ್ ಖಾನ್ ಮತ್ತು ಶರೀಫ್ ರವರು ಇತರರೊಂದಿಗೆ ಸೇರಿಕೊಂಡು ಯಾವುದೋ ಕಾರಣದಿಂದ ದ್ವೇಷಗೊಂಡು ಸೈಯಿಪುದ್ದಿನ್ ರವರನ್ನು ಕೊಲ್ಲುವ ಉದ್ದೇಶದಿಂದ ಮಲ್ಪೆಗೆ ಕರೆದುಕೊಂಡು ಬಂದು ಬೆಳಿಗ್ಗೆ 10:15 ಗಂಟೆಯಿಂದ ಬೆಳಿಗ್ಗೆ 11:30 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಕೊಡವೂರು ಗ್ರಾಮದ ನಾಗಬನದ ಬಳಿ H A Manzil ಹೆಸರಿನ ಅವರ ಮನೆಯಲ್ಲಿ ಮಚ್ಚಿನಿಂದ ತಲೆಗೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿ ಅವರ KA-19-MN-9062 ನೇ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಅಬ್ದುಲ್ ಅಂಜಿಲ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:103 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಹತ್ಯೆಗೆ ಸುಫಾರಿ ನೀಡಿರುವ ಶಂಕೆ ಯಲ್ಲಿ ತನಿಖೆ ಮುಂದುವರಿದಿದೆ.
