unnamed.webp
Spread the love

ಕಾರ್ಕಳ: ದಿನಾಂಕ :30/09/2025 (ಹಾಯ್ ಉಡುಪಿ ನ್ಯೂಸ್)ಚಿಲಿಂಬಿಯ ಸಾರ್ವಜನಿಕ ರಸ್ತೆಯಲ್ಲಿ ಮ್ರತ ದನದ ದೇಹವೊಂದು ಪತ್ತೆಯಾಗಿದ್ದು ಸಂಶಯಾಸ್ಪದವಾಗಿ ದ್ದು ಯಾರೋ ದನ ಕಳ್ಳರು ಸತ್ತ ದನವನ್ನು ಎಸೆದು ಹೋಗಿರಬಹುದು ಎಂದು ದೂರು ನೀಡಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ರುದ್ರೇಶ್ ಅವರಿಗೆ ದಿನಾಂಕ:30-09-2025 ರಂದು ಬೆಳಿಗ್ಗೆ ಕಾಂತಾವರ ಗ್ರಾಮದ ಚಿಲಿಂಬಿ ಎಂಬಲ್ಲಿ ಹಾದು ಹೋಗುವ ಇರ್ವತ್ತೂರು – ಚಿಲಿಂಬಿ ಸಾರ್ವಜನಿಕ ರಸ್ತೆ ಬದಿ ದನದ ಮೃತ ದೇಹವನ್ನು ಯಾರೋ ಅಪರಿಚಿತರು ಬಿಸಾಡಿ ಹೋಗಿರುತ್ತಾರೆ ಎಂದು ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಪ್ರಕಾರ  ರುದ್ರೇಶ್ ರವರು ಠಾಣೆಯ ಸಿಬ್ಬಂದಿ ಯವರನ್ನು ಜೊತೆಯಲ್ಲಿ ಕರೆದುಕೊಂಡು ಕಾಂತಾವರ ಗ್ರಾಮದ ಚಿಲಿಂಬಿ ಎಂಬಲ್ಲಿಗೆ  ತೆರಳಿ ಅಲ್ಲಿ ಇರ್ವತ್ತೂರು ಕಡೆಗೆ ಹಾದು ಹೋಗುವ ಇರ್ವತ್ತೂರು – ಚಿಲಿಂಬಿ ಮಣ್ಣು ರಸ್ತೆಯ ಬದಿಯಲ್ಲಿ ನಸು ಕಂದು ಬಣ್ಣದ ದನದ ಮೃತ ದೇಹ ಬಿದ್ದುಕೊಂಡಿದ್ದು,  ಮೃತ ದನದ ಬಗ್ಗೆ ಆಸುಪಾಸಿನ ಸ್ಥಳೀಯರನ್ನು, ಮಾಹಿತಿದಾರರನ್ನು ವಿಚಾರಿಸಿದಾಗ  ದನದ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದು, ಯಾರೋ ಅಪರಿಚಿತರು  ನಸು ಕಂದು ಬಣ್ಣದ ದನವನ್ನು ಎಲ್ಲಿಂದಲೋ ಕಳವು ಮಾಡಿ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಸಮಯ ಉಸಿರುಗಟ್ಟಿ ಮೃತಪಟ್ಟಿರುವುದನ್ನು ಕಂಡು ರಸ್ತೆ ಬದಿ ಎಸೆದು ಹೋಗಿರುವುದು ಕಂಡು ಬರುತ್ತದೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ  ಕಲಂ 303(2)  ಬಿ.ಎನ್.ಎಸ್. 2023,  ಮತ್ತು ಕಲಂ: 11(1)(D) ಪ್ರಾಣಿ ಹಿಂಸೆ ತಡೆ ಕಾಯ್ದೆ1960 ರಂತೆ ಪ್ರಕರಣ ದಾಖಲಾಗಿದೆ.

error: No Copying!