ಹಿರಿಯಡ್ಕ: ಏಪ್ರಿಲ್ ೬(ಹಾಯ್ ಉಡುಪಿ ನ್ಯೂಸ್) ಬೊಮ್ಮರಬೆಟ್ಟು ಗ್ರಾಮದಲ್ಲಿ ಜಾಗವೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಗಿಡ ಮರಗಳನ್ನು ಕಡಿದ ಬಗ್ಗೆ ದೂರು ದಾಖಲಾಗಿದೆ.
ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ಬೊಗ್ಗು ಎಂಬುವರು ೧ ಎಕ್ರೆ ದರ್ಖಾಸು ಜಾಗವನ್ನು ಹೊಂದಿದ್ದು ದಿನಾಂಕ ೨-೪-೨೦೨೨ ರಂದು ಸಮಯ ಸುಮಾರು ೧೧-೩೫ ಘಂಟೆಯ ಸಮಯದಲ್ಲಿ ಇಂದಿರ ಕೊಂಕಣಿ ಮತ್ತು ಅವರ ಮಗ ರವೀಂದ್ರ ಎಂಬವರು ಬೊಗ್ಗು ಅವರು ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಅನುಮತಿ ಇಲ್ಲದೆ ಸುಮಾರು ೫೦,೦೦೦ ಮೌಲ್ಯದ ಗಿಡ ಮರಗಳನ್ನು ಕಡಿದು ಹಾಕಿ ಸಾಗಿಸಿರುತ್ತಾರೆ ಎಂದು ದೂರು ನೀಡಿರುತ್ತಾರೆ.ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.